Saturday, May 4, 2024
spot_imgspot_img
spot_imgspot_img

ಉಡುಪಿ: ಅಂತರ್ ಜಿಲ್ಲಾ ಮನೆ ಕಳ್ಳತನ; ಆರೋಪಿ ಬಂಧನ..!

- Advertisement -G L Acharya panikkar
- Advertisement -

ಉಡುಪಿ: ಅಂತರ್ ಜಿಲ್ಲಾ ಮನೆ ಕಳ್ಳತನ ಪ್ರರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಕಾಪು ಮಲ್ಲಾರಿನಲ್ಲಿ ನಡೆದಿದೆ.

ಬಂಧಿತನ್ನು ಮಲ್ಲಾರು ಗ್ರಾಮದ ತೌಸೀಫ್ ಅಹಮದ್(34) ಎಂದು ಗುರುತಿಸಲಾಗಿದೆ.

ಬಡಗುಬೆಟ್ಟು ಗ್ರಾಮ ಶ್ರೀಮತಿ ಎಂಬವರ ಮನೆಗೆ ನುಗ್ಗಿದ ಕಳ್ಳರು ಒಟ್ಟು 188 ಗ್ರಾಂ ತೂಕದ ಚಿನ್ನಾಭರಣ ಹಾಗೂ 15,500ರೂ. ನಗದು ಕಳವು ಮಾಡಿದ್ದರು. ಅದರಂತೆ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪಡಿ.ಆರ್, ಎಸ್ಸೆಗಳಾದ ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ, ಪುನೀತ್ ಕುಮಾರ್ ಮತ್ತು ಸಿಬ್ಬಂದಿ ಸತೀಶ್ ಬೆಳ್ಳೆ, ಚೇತನ್, ಆನಂದ, ಎಸ್.ಶಿವಕುಮಾರ್, ರಿಯಾಝ್ ಅಹಮದ್‌, ವಿಶ್ವನಾಥ ಶೆಟ್ಟಿ, ಕಿರಣ್, ಹೇಮಂತ್ ಕುಮಾರ್, ಓಬಳೇಶ್, ರಾಜೇಂದ್ರರವರನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಈತನಿಂದ ಕಳವು ಮಾಡಿದ್ದ ಒಟ್ಟು 9,00,500ರೂ. ಮೌಲ್ಯದ 155 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ಈಗಾಗಲೇ ಬಂಟ್ವಾಳ, ಪಣಂಬೂರು, ಬಜಪೆ ಕಡೆಗಳಲ್ಲಿ ಹಗಲು ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ.

- Advertisement -

Related news

error: Content is protected !!