Saturday, April 27, 2024
spot_imgspot_img
spot_imgspot_img

ಪಡುಬಿದ್ರೆ: ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಾಪತ್ತೆ…!!

- Advertisement -G L Acharya panikkar
- Advertisement -

ಪಡುಬಿದ್ರೆ : ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪ ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳು ಮನೆಯಿಂದ ಉಡುಪಿಗೆ ಮೊಬೈಲ್ ಖರೀದಿಸಿ ಬರುವುದಾಗಿ ಹೇಳಿ ಆ. 1ರಂದು ಹೋದವರು ಮರಳಿ ಬಾರದೆ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ದಂಪತಿಗಳು ಶಿಫಾ ಶೇಖ್ (25) ಹಾಗೂ ರಿಯಾಜ್ (28) ನಂದಿಕೂರು ಎಂದು ತಿಳಿದು ಬಂದಿದೆ. ಇವರು ಸುಮಾರು ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಾರೆ ಎನ್ನಲಾಗಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಯಾಜ್ ಮಣಿಪಾಲದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದರು. ಶಿಫಾ ಶೇಖ್ ತಂದೆ-ತಾಯಿ ಮದುವೆಗೆ ಮುಂಚೆ ತೀರಿಕೊಂಡಿದ್ದರು, ಆ ವೇಳೆ ಬಿಎಎಂಎಸ್ ಕಡೆಯ ವರ್ಷದಲ್ಲಿ ಕಲಿಯುತ್ತಿದ್ದ ಈಕೆಯು ವಿದ್ಯಾಭ್ಯಾಸ ಮೊಟಕುಗೊಳಿಸಿ ರಿಯಾಜ್ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗಷ್ಟೇ ಇವರ ಎರಡೂವರೆ ತಿಂಗಳ ಮಗು ತೀರಿಕೊಂಡಿತ್ತು ಎಂದು ತಿಳಿದುಬಂದಿದೆ. ಸದ್ಯ ದಂಪತಿಗಳು ನಾಪತ್ತೆಯಾಗಿದ್ದು, ರಿಯಾಜ್ ಮೊಬೈಲ್ ಸ್ವಿಚ್ ಆಫ್ ಆಗಿದೆ. ಶಿಫಾ ಮೊಬೈಲ್ ಮನೆಯಲ್ಲೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!