Sunday, June 21, 2026
spot_imgspot_img
spot_imgspot_img

ಉಡುಪಿ: ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಅಂಬುಲೆನ್ಸ್‌ ಪಲ್ಟಿ..!

- Advertisement -
- Advertisement -

ಉಡುಪಿ: ನಕ್ಸಲ್ ನಿಗ್ರಹ ಪಡೆಯ ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲ್ ನಾಯಕ ವಿಕ್ರಂ ಗೌಡ ಅವರ ಮೃತದೇಹ ಕೊಂಡೊಯ್ಯುತ್ತಿದ್ದ ಅಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಬಿದ್ದ ಘಟನೆ ಹೆಬ್ರಿ ಕೂಡ್ಲು ರಸ್ತೆಯಲ್ಲಿ ಮಧ್ಯಾಹ್ನ ವೇಳೆ ನಡೆದಿದೆ. ಆದರೆ ಇದರಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ಬಳಿಕ ಬುಧವಾರ ಬೆಳಗ್ಗೆ ವಿಕ್ರಂ ಗೌಡ ಮೃತದೇಹವನ್ನು ತಮ್ಮ ಸುರೇಶ್ ಗೌಡ ಹಾಗೂ ತಂಗಿ ಸುಗುಣ ಅವರಿಗೆ ಹಸ್ತಾಂತರಿಸಲಾಯಿತು. ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಅವರ ಹುಟ್ಟೂರು ಹೆಬ್ರಿ ಸಮೀಪದ ಕೂಡ್ಲುಗೆ ಕೊಂಡೊಯ್ಯಲಾಯಿತು. ಅಂಬ್ಯುಲೆನ್ಸ್‌ನಲ್ಲಿ ಸುರೇಶ್ ಗೌಡ ಕೂಡ ಇದ್ದರು.

ದಾರಿ ಮಧ್ಯೆ ದನವೊಂದು ಅಂಬ್ಯುಲೆನ್ಸ್‌ಗೆ ಅಡ್ಡ ಬಂದಿದ್ದು, ಇದರ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಅಂಬ್ಯುಲೆನ್ಸ್ ರಸ್ತೆಯ ಬದಿ ಚರಂಡಿಯತ್ತ ಸಾಗಿತು. ಇದರಿಂದ ಯಾವುದೇ ಅಪಘಾತ ಆಗಿಲ್ಲ ಮತ್ತು ಯಾರಿಗೂ ಗಾಯಗಳಾಗಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಬಳಿಕ ಸ್ಥಳೀಯರ ನೆರವಿನಿಂದ ಅಂಬುಲೆನ್ಸ್‌ ಅನ್ನು ರಸ್ತೆಗೆ ತಂದು ಮೃತದೇಹವನ್ನು ಕೊಂಡೊಯ್ಯಲಾಗಿದೆ.

- Advertisement -

Related news

error: Content is protected !!