Friday, April 19, 2024
spot_imgspot_img
spot_imgspot_img

ಉಡುಪಿ ತುಳುಕೂಟದ ತುಳು ಭಾವಗೀತೆ ಸ್ಫರ್ಧೆ

- Advertisement -G L Acharya panikkar
- Advertisement -

ಉಡುಪಿ: ಉಡುಪಿ ತುಳುಕೂಟದ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾದ ಹಿರಿಯ ಕವಿ ದಿ.ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಸ್ಫರ್ಧೆಯನ್ನು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಉದ್ಘಾಟಿಸಿದರು.

ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ತುಳುಕೂಟದ ಸದಸ್ಯ ಪ್ರಕಾಶ್ ಸುವರ್ಣ ಕಟಪಾಡಿ ಬರೆದ ತುಳು ಭಕ್ತಿ ಮತ್ತು ಭಾವಗೀತೆ ಕೃತಿ ‘ಬೊಲ್ಪು’ಬಿಡುಗಡೆ ಮಾಡಿದರು. ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿದ್ದರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ವಸಂತ ಎನ್.ಶೆಟ್ಟಿ ಚೊಕ್ಕಾಡಿ, ಉಡುಪಿ ಮಲಬಾರ್ ಗೋಲ್ಡ್ ಡೈಮಂಡ್ಸ್ ಸಂಸ್ಥೆಯ ಮುಖ್ಯಸ್ಥ ಹಫೀಜ್ ರೆಹಮಾನ್, ಆಕಾಶವಾಣಿ ಕಲಾವಿದೆ ಭಾರತಿ ಟಿ.ಕೆ. ಉಡುಪಿ, ಉದ್ಯಮಿ ಮಹಮ್ಮದ್ ಆರೀಫ್ ಭಾಗವಹಿಸಿದ್ದರು.

ಈ ಸಂದರ್ಭ ಸಂಗೀತ ಕಲಾವಿದರಾದ ಶಂಕರದಾಸ್ ಚೇಂಡ್ಕಳ, ಭಾಗ್ಯಲಕ್ಷ್ಮೀ ಉಪ್ಪೂರು, ರೋಹಿತ್ ಕುಮಾರ್ ಮಲ್ಪೆಅವರನ್ನು ಸನ್ಮಾನಿಸಲಾಯಿತು. ತುಳುಕೂಟದ ಪದಾಧಿಕಾರಿಗಳಾದ ಮಹಮ್ಮದ್ ಮೌಲಾ, ಮೋಹನ್ ಶೆಟ್ಟಿ, ಎಂ.ಜಿ.ಚೈತನ್ಯ, ಪ್ರಭಾಕರ ಭಂಡಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಚಾಲಕ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿದರು. ಉಪನ್ಯಾಸಕ ದಯಾನಂದ ಡಿ., ಸಾಹಿತಿ ದಯಾನಂದ ಕೆ.ಶೆಟ್ಟಿ ದೆಂದೂರು ಕಾರ್ಯಕ್ರಮ ನಿರೂಪಿಸಿದರು. ತುಳುಕೂಟದ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ವಂದಿಸಿದರು.

ಸ್ಪರ್ಧೆಯ ಫಲಿತಾಂಶ: ಜೂನಿಯರ್ ವಿಭಾಗದ ಭಾವಗೀತೆ ಸ್ಪರ್ಧೆಯಲ್ಲಿ ಅಮೃತಾ ಜಿ ಉಡುಪಿ ಪ್ರಥಮ, ಶ್ರೀಜಾ ಉದ್ಯಾವರ ದ್ವಿತೀಯ, ಐಶಾನಿ ಶೆಟ್ಟಿ ಮಣಿಪಾಲ ತೃತೀಯ. ಸೀನಿಯರ್ ವಿಭಾಗದ ಭಾವಗೀತೆ ಸ್ಪರ್ಧೆಯಲ್ಲಿ ಅನ್ವಿತಾ ಜಿ.ಮೂರ್ತಿ ಉಡುಪಿ ಪ್ರಥಮ, ಅಶ್ವಿಜಾ ಉಡುಪ ಕಿನ್ನಿಗೋಳಿ ದ್ವಿತೀಯ, ಪುರಂದರ್ ಕೋಟ್ಯಾನ್ ತೃತೀಯ ಬಹುಮಾನ ಪಡೆದರು.

- Advertisement -

Related news

error: Content is protected !!