Monday, September 28, 2026
spot_imgspot_img
spot_imgspot_img

ಉಡುಪಿ: ಮಹಿಳೆಯೊಬ್ಬರು ನೇಣಿಗೆ ಶರಣು!

- Advertisement -
- Advertisement -

ಉಡುಪಿ: ಉದ್ಯಾವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ನೇಣಿಗೆ ಶರಣಾದ ಮಹಿಳೆ ಪಿತ್ರೋಡಿ ನಿವಾಸಿ ಸುಕನ್ಯ(52) ಎಂದು ಗುರುತಿಸಿದ್ದಾರೆ.

ಮೃತರು ಮನೆಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಸ್ಥಳೀಯರ ಸಹಕಾರದಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಆಕೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಚೇತನ್ ಕುಮಾರ್ ಸಹಿತ 2 ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕಾಪು ಪೊಲೀಸ್ ಠಾಣಾ ಎ.ಎಸ್ಸೈ ದಯಾನಂದ್ ಮತ್ತು ಆರಕ್ಷಕ ಸಿಬ್ಬಂದಿಯವರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!