


ಬಂಟ್ವಾಳ: ವಾತ್ಸಲ್ಯಮಯಿ ಮಹಿಳಾ ಅಭಿವೃದ್ದಿ ಮತ್ತು ಸಂಶೋಧನಾ ಸಂಸ್ಥೆ (ರಿ)ಯ ದಶಮಾನೋತ್ಸವ ಸಂಭ್ರಮವು ಜ.13ರಂದು ಬಿ.ಸಿ.ರೋಡು ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ.
ಜ.13ರಂದು ಬೆಳಿಗ್ಗೆ ಸಂಪನ್ಮೂಲ ವ್ಯಕ್ತಿ ವಕೀಲರು ಮತ್ತು ಸಂಧಾನಕಾರರಾದ ಗೌರಿ ಶ್ರೇಯಸ್ ಇವರಿಂದ ಕಾರ್ಯಾಗಾರ ನಡೆಯಲಿದೆ. ಬಳಿಕ ದಶಮಾನೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡೆಸಿಕೊಡಲಿದ್ದಾರೆ. ಕರ್ನಾಟಕ ಸರಕಾರದ ಮಾಜಿ ಸಚಿವ ರಮಾನಾಥ ರೈ ಘನ ಉಪಸ್ಥಿತರಿರುವರು. ನ್ಯಾಯವಾದಿಗಳು, ಪ್ರತಿಷ್ಠಿತ ಕರ್ನಾಟಕ ಸರಕಾರದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ.)ಬಾಳ್ತಿಲ ಸಂಸ್ಥಾಪಕರಾದ ಶೈಲಜಾ ರಾಜೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀಧರ್ ಶೆಟ್ಟಿ ಪುಳಿಂಚ ವಕೀಲರು, ಮಂಗಳೂರು, ಬೆಳ್ತಂಗಡಿ ತಾ.ಮುಂಡಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಾಲಿ, ಬೆಳ್ತಂಗಡಿ ತಾ.ರಬ್ಬರ್ ಬೆಳೆಗಾರರ ಸಹಕಾರಿ ಸಂಘ(ರಿ) ಅಧ್ಯಕ್ಷ ಶ್ರೀಧರ್ ಜಿ.ಭಿಡೆ, ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಮೂತ್ರರೋಗ ತಜ್ಞರು ಮತ್ತು ಡಾ.ಬಿ.ಸಿ.ರಾಯ್ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರಾದ ಡಾ| ಸದಾನಂದ ಪೂಜಾರಿ, ಬಿ.ಸಿ ರೋಡು ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ಕುಮಾರ್ ವೈ ವಕೀಲರು, ಬೆಂಗಳೂರು ಹೈಕೋರ್ಟ್ ವಕೀಲರಾದ ನವನೀತ್, ಬಿ.ಸಿ ರೋಡು ಅರಿವಳಿಕೆ ತಜ್ಞರು ಡಾ|ಶಶಿಕಲಾ ಸೋಮಯಾಜಿ, ಕುಂದಾಪುರ ತಾ.ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ರಾಧಾದಾಸ್, ಕಡಬ ಕಾಮಧೇನು ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ಉಷಾ ಅಂಚನ್, ಮೂಡಬಿದಿರೆ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಿ ಕೇಶವ, ಜೆ.ಸಿ.ಐ ಬಂಟ್ವಾಳ ಘಟಕದ ಅಧ್ಯಕ್ಷೆ ರಶ್ಮಿ ವಚನ್ ಶೆಟ್ಟಿ ಭಾಗವಹಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಗೆ “ಗಿರಿಜಾ ರತ್ನ” ಪ್ರಶಸ್ತಿ ಪ್ರಧಾನ ನಡೆಯಲಿದೆ. ಕ್ಯಾನ್ಸರ್ ಪೀಡಿತ, ನಿರಾಶ್ರಿತರಿಗೆ, ಅಸಹಾಯಕ ಮಹಿಳೆಯರಿಗೆ ಧನಸಹಾಯ.
“ನವದುರ್ಗಾ ಶಕ್ತಿ” ಅಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 2 ಕ್ಕೆ ಕಾನೂನು, ಸಮಾಜ, ಕುಟುಂಬ, ಅಮಲು ಪದಾರ್ಥ, ಆರೋಗ್ಯ, ಸಾಮಾಜಿಕ ಜಾಲತಾಣ ಇದರ ಬಗ್ಗೆ ’ಮುಕ್ತ ಸಂವಾ” ನಡೆಯಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮೊಡಂಕಾಪು ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ರೆ|ಫಾ| ವಲೇರಿಯನ್ ಎಸ್.ಡಿ ಸೋಜ, ಬಿ.ಸಿ ರೋಡು ನೋಟರಿ ವಕೀಲರಾದ ಅಶ್ವನಿ ರೈ, ವಿಜಯಲಕ್ಷ್ಮೀ ಕಟೀಲು ಶಿಕ್ಷಕರು ಮತ್ತು ಸಾಹಿತಿ ಸರಕಾರಿ ಪ್ರೌಢಶಾಲೆ, ಮಂಚಿ ಕೊಳ್ನಾಡು, ಇರಾ ಬಿಲ್ಲವ ಸಂಘ ಅಧ್ಯಕ್ಷ ಜಯರಾಮ್ ಪೂಜಾರಿ ಇರಾ, ಬಿ.ಸಿ.ರೋಡು ಬಿಲ್ಲವ ಸಂಘ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ಡಿ.ದೇರಾಜೆಗುತ್ತು, ಉಪ್ಪಿನಂಗಡಿ ದಂತ ವೈದ್ಯರಾದ ಡಾ|ರಾಜಾರಾಮ್, ಮೆಲ್ಕಾರ್ ಶಿವಗಿರಿ ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಿಕಾ ವಿ.ಶೆಟ್ಟಿ, ತಾ.ಪಂ.ಮಾಜಿ ಅಧ್ಯಕ್ಷ ತುಂಗಪ್ಪ ಬಂಗೇರ, ಕೈಕಂಬ ಸಾಯಿಲೀಲಾ ಹೋಟೆಲ್ ಮಾಲಕ ಸದಾನಂದ ಬಂಗೇರ, ಎಕ್ಸ್‌ಪೋರ್ಟ್ ಮ್ಯಾನೇಜರ್ ಮಾಧವ ಕೆ.ಮೂಲ್ಯ, ವಿಜಯ ಬ್ಯಾಂಕ್ ನಿವೃತ್ತ ಶಾಖಾ ವ್ಯವಸ್ಥಾಪಕ ಬೇಬಿ ಕುಂದರ್, ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಭಾಗವಹಿಸಲಿದ್ದಾರೆ.
ಸಂಜೆ ಗಂಟೆ 6ಕ್ಕೆ “ಶ್ರೀಶೈಲ ಕಲಾ” ನೃತ್ಯ ತಂಡದಿಂದ ವೈವೀಧ್ಯಮಯ ನೃತ್ಯಾವಳಿಗಳು ನಡೆಯಲಿದೆ.








