Friday, May 3, 2024
spot_imgspot_img
spot_imgspot_img

ಉಳ್ಳಾಲ: ಗಾಳಿ ಮಳೆಗೆ ಉರುಳಿ ಬಿದ್ದ ಶಾಲೆಯ ಮೇಲ್ಚಾವಣಿ ಶೀಟ್; ರಜೆ ಕಾರಣ ತಪ್ಪಿದ ಭಾರೀ ಅನಾಹುತ

- Advertisement -G L Acharya panikkar
- Advertisement -

ಉಳ್ಳಾಲ: ಕರಾವಳಿಯಲ್ಲಿ ಭಾರೀ ಮಳೆ ಗಾಳಿಗೆ ತಲಪಾಡಿಯಲ್ಲಿರುವ ಶಾರದಾ ವಿದ್ಯಾಲಯ ಕಟ್ಟಡದ ಮೇಲೆ ಅಳವಡಿಸಿದ್ದ ಶೀಟ್‌ ಚಾವಣಿ ಕೆಳಗೆ ಬಿದ್ದ ಘಟನೆ ನಡೆದಿದೆ.

ದೇವಿನಗರದ ಶಾರದಾ ವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಆರು ಮಹಡಿಯ ಶಾಲಾ ಕಟ್ಟಡದ ಮೇಲೆ ಇತ್ತೀಚೆಗೆ ಇದನ್ನು ಅಳವಡಿಸಲಾಗಿತ್ತು. ಸತತ ಗಾಳಿ ಮಳೆ ಕಾರಣದಿಂದಾಗಿ ಇದು ಬೆಳಿಗ್ಗೆ ಶೀಟ್ ಕೆಳಗೆ ಬಿದ್ದಿದೆ. ಮೇಲ್ಚಾವಣೆಗೆ ಹಾಕಲಾಗಿದ್ದ ರಾಡ್ ಗಳೂ ಕೂಡ ಕೆಳಗೆ ಬಿದ್ದಿದ್ದು, ಇದರಿಂದಾಗಿ ಹಲವು ವಾಹನಗಳು ಜಖಂಗೊಂಡಿವೆ. ಭಾರಿ ಮಳೆ ಕಾರಣ ಸತತ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲಾ–ಕಾಲೇಜುಗಳಿಗೆ ಜಿಲ್ಲಾ ಆಡಳಿತ ರಜೆ ಘೋಷಿಸಿದೆ. ಹೀಗಾಗಿ ಈ ಶಾಲೆಗೂ ರಜೆ ಇತ್ತು.

- Advertisement -

Related news

error: Content is protected !!