Monday, July 14, 2025
spot_imgspot_img
spot_imgspot_img

ಬಂಟ್ವಾಳ ತಾಲೂಕು ತುಳುವ ಮಹಾಸಭೆಯ ಸಂಚಾಲಕರಾಗಿ ಉಮೇಶ್ ಗೌಡ ಮಾಡತ್ತೇಲು ಆಯ್ಕೆ

- Advertisement -
- Advertisement -

ಬಂಟ್ವಾಳ: ತುಳುನಾಡಿನ ಅಸ್ಮಿತೆಯ ಚಳುವಳಿಯಾಗಿ ಗುರುತಿಸಲ್ಪಟ್ಟ ತುಳುವ ಮಹಾಸಭೆ ತನ್ನ ಶತಮಾನೋತ್ಸವದ ಸಂಧರ್ಭದಲ್ಲಿ ಹೊಸ ಚಟುವಟಿಕೆಗಳಿಗೆ ಪುನಶ್ಚೇತನ ನೀಡುತ್ತಿದೆ. ಇಂತಹ ನಿರ್ಣಾಯಕ ಸಮಯದಲ್ಲಿ, ಬಂಟ್ವಾಳ ತಾಲೂಕು ಘಟಕದ ಸಂಚಾಲಕರಾಗಿ ಸಮಾಜ ಶಾಸ್ತ್ರದಲ್ಲಿ ಪದವಿ ಪಡೆದ ವಿದ್ಯಾವಂತ ಹಾಗೂ ಸಾಂಸ್ಕೃತಿಕ ಸೇವಾಭಿಮಾನಿ ಉಮೇಶ್ ಗೌಡ ಮಾಡತ್ತೇಲು ಅವರು ಆಯ್ಕೆಯಾಗಿದ್ದಾರೆ.

ತುಳು ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಉಮೇಶ್ ಗೌಡ ಅವರು, ತುಳುನಾಡಿನ ಪ್ರಾಚೀನ ಸಮರಕಲೆಗಳು, ಜನಪದ ಶಾಸ್ತ್ರ ಹಾಗೂ ಧಾರ್ಮಿಕ ಪರಂಪರೆಗಳ ಅಧ್ಯಯನ ನಡೆಸಿ, ನಾಡು-ನುಡಿಗೆ ನಿಷ್ಠೆಯೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ. ವಿಟ್ಲದ ಒಕ್ಕೆತ್ತೂರು ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಯಾಗಿ, ಅವರು ಹಲವು ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ತುಳುವ ಮಹಾಸಭೆ ತನ್ನ ಪುನಶ್ಚೇತನ ಗುರಿಯಲ್ಲಿ, ತುಳುನಾಡಿನ ಕಲಾ, ಸಾಹಿತ್ಯ, ಜನಪದ ಪರಂಪರೆ, ತುಳುನಾಡ ಕಳರಿ ತರಬೇತಿ ಮತ್ತು ಮರ್ಮ ಚಿಕಿತ್ಸೆ, ನಶಿಸಿದ ದೈವ ಆರಾಧನೆಗಳ ಪುನರುಜ್ಜೀವನ, ಬಸ್ರೂರು ತುಳುವೇಶ್ವರ ದೇವಸ್ಥಾನ ಪುನರ್ ಉದ್ಧಾರಣ, ಹಾಗೂ ಜಾತಿ–ಮತ–ಭಾಷಾ ಸೌಹಾರ್ದತೆ ಕಾಪಾಡುವ ಮಹತ್ವದ ಯೋಜನೆಗಳಿಗೆ ನಾಂದಿ ಹಾಡಿದೆ. ಈ ಯೋಜನೆಗಳನ್ನು ಕಾರ್ಯಗತಗೊಳಿಸಲು, ಅಲ್ಲಲ್ಲಿ ತುಳುವ ಮಹಾಸಭಾ ಸಮಿತಿಗಳನ್ನು ರೂಪಿಸಲಾಗುತ್ತಿದೆ.

ಈ ಸಂದರ್ಭದಲ್ಲಿ, ಉಮೇಶ್ ಗೌಡ ಮಾಡತ್ತೇಲು ಅವರನ್ನು ಬಂಟ್ವಾಳ ತಾಲೂಕು ತುಳುವ ಮಹಾಸಭೆಯ ಸಂಚಾಲಕರಾಗಿ ಆಯ್ಕೆ ಮಾಡಿದ್ದು, ತುಳುನಾಡಿನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಭಾಷಾಭಿಮಾನದ ದಿಶೆಯಲ್ಲಿ ಹೊಸ ಹೆಜ್ಜೆ ಎಂದು ತುಳು ಸಮುದಾಯ ಮತ್ತು ಸಾಂಸ್ಕೃತಿಕ ಪ್ರೇಮಿಗಳು ಅಭಿನಂದಿಸಿದ್ದಾರೆ.

- Advertisement -

Related news

error: Content is protected !!