Tuesday, May 14, 2024
spot_imgspot_img
spot_imgspot_img

ಉಪ್ಪಿನಂಗಡಿ: ತವರು ಮನೆಗೆ ಬಂದಿದ್ದ ವಿವಾಹಿತ ಮಹಿಳೆ ನಾಪತ್ತೆ

- Advertisement -G L Acharya panikkar
- Advertisement -

ಉಪ್ಪಿನಂಗಡಿ: ತವರು ಮನೆಗೆ ಬಂದಿದ್ದ ವಿವಾಹಿತ ಮಹಿಳೆ ನಾಪತ್ತೆಯಾದ ಘಟನೆ ನಡೆದಿದೆ. ಉಪ್ಪಿನಂಗಡಿ ಸಮೀಪದ ಬಿಳಿಯೂರು ಗ್ರಾಮದ ಕಾನ ಮನೆ ನಿವಾಸಿ ಶ್ವೇತಾ (24) ನಾಪತ್ತೆಯಾದ ಮಹಿಳೆ.

ಈ ಬಗ್ಗೆ ಮಹಿಳೆಯ ತಂದೆ ಅಣ್ಣು ಮೇರ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಣೆಯಾದಾಕೆ ವಿವಾಹಿತೆಯಾಗಿದ್ದು, ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದ ಅವರು ಎಪ್ರಿಲ್ 24 ರ ಸಂಜೆಯಿಂದ ನಾಪತ್ತೆಯಾಗಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಈಕೆ ಕನ್ನಡ ಹಾಗೂ ತುಳು ಭಾಷೆಯನ್ನು ಮಾತನಾಡುವ, ಸಾಧಾರಣ ಕಪ್ಪು ಮೈ ಬಣ್ಣದವರಾಗಿದ್ದು, ಎಲ್ಲಿಯಾದರೂ ಕಂಡಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!