Thursday, June 18, 2026
spot_imgspot_img
spot_imgspot_img

ಕಲ್ಲೇರಿ:ಬೈಕ್ ಮತ್ತು ಪಿಕಪ್ ಡಿಕ್ಕಿ ಬೈಕ್ ಸವಾರರಿಬ್ಬರ ದುರ್ಮರಣ- ಪಿಕಪ್ ವಾಹನ ಪತ್ತೆ ಹಚ್ಚಿದ ಪೊಲೀಸರು

- Advertisement -
- Advertisement -

ಉಪ್ಪಿನಂಗಡಿ: ಪಿಕಪ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ನಡೆದಿದೆ.

ಉರುವಾಲು ಕೃಷ್ಣ ಶೆಟ್ಟಿ ಹಾಗೂ ಕಣಿಯೂರು ದಯಾನಂದ ಗೌಡ ಎಂಬವರೇ ಮೃತ ದುರ್ದೈವಿಗಳು. ಘಟನೆ ನಡೆಯುತ್ತಿದ್ದಂತೆಯೇ ಪಿಕಪ್ ಚಾಲಕ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ. ಸ್ಥಳಕ್ಕೆ ಉಪ್ಪಿನಂಗಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಪ್ಪಿನಂಗಡಿ ಪೊಲೀಸರು ತಕ್ಷಣ ಪಿಕಪ್ ವಾಹನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!