Sunday, July 19, 2026
spot_imgspot_img
spot_imgspot_img

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ; ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆತಂಕ!

- Advertisement -
- Advertisement -

ಹೊಸದಿಲ್ಲಿ: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ ಮಧ್ಯಪ್ರಾಚ್ಯದ ಮೇಲೆ ಈ ಸಂಘರ್ಷದ ವಿಸ್ತ್ರತ ಪರಿಣಾಮವಾಗುವ ಭೀತಿಯ ಹಿನ್ನೆಲೆಯಲ್ಲಿ ಮತ್ತು ಜಾಗತಿಕ ಇಂಧನ ಪೂರೈಕೆ ವ್ಯವಸ್ಥೆ ವ್ಯತ್ಯಯವಾಗುವ ಭೀತಿಯಿಂದ ತೈಲ ಬೆಲೆ ದಿಢೀರ್ ಶೇ.10ರಷ್ಟು ಹೆಚ್ಚಳವಾಗಿದೆ.

ಸೋಮವಾರ ನಸುಕಿನ ವಹಿವಾಟಿನಲ್ಲಿ ಬ್ರೆಂಟ್ ಕ್ರೂಡ್ ಮತ್ತು ನೈಮೆಕ್ಸ್ ಲೈಟ್ ಸ್ವೀಟ್ ಕ್ರೂಟ್ ಜಿಗಿತ ಕಂಡಿದ್ದು, ಬ್ರೆಂಟ್ ಬೆಲೆ ಒಂದು ಹಂತದಲ್ಲಿ ಶೇ.12ರಷ್ಟು ಏರಿಕೆ ಕಂಡು ಬ್ಯಾರಲ್ ಗೆ 82 ಡಾಲರ್ ನಷ್ಟು ಹೆಚ್ಚಿದೆ. ಶುಕ್ರವಾರ ಈ ಬೆಲೆ ಬ್ಯಾರಲ್ ಗೆ 73 ಡಾಲರ್ ನಷ್ಟಿತ್ತು. ಏಷ್ಯಾದಲ್ಲಿ ಬೆಳಿಗ್ಗೆ ವೇಳೆ ಬೆಲೆ ಪ್ರತಿ ಬ್ಯಾರಲ್ ಗೆ 79.30 ಡಾಲರ್ ಇದೆ. ಅಮೆರಿಕದ ಕಚ್ಚಾತೈಲ ಬೆಲೆ 8 ಡಾಲರ್ ಅಥವಾ ಶೇ.12ರಷ್ಟು ಏರಿಕೆ ಕಂಡಿದ್ದು, ಬ್ಯಾರಲ್ ಗೆ 75 ಡಾಲರ್ ಇದೆ. ಪಶ್ಚಿಮ ಟೆಕ್ಸಸ್ ಇಂಟ‌ರ್ ಮೀಡಿಯೇಟ್ ಶೇ.8ರಷ್ಟು ಏರಿಕೆ ಕಂಡು ಬ್ಯಾರಲ್ ದರ 72 ಡಾಲರ್ ಗೆ ಏರಿದೆ.

ಇಡೀ ವರ್ಷದಲ್ಲಿ ಏರುಗತಿಯಲ್ಲಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇದೀಗ ಮತ್ತೆ ಏರಿಕೆಯಾಗಿದ್ದು, ಕಳೆದ ಜನವರಿಯಿಂದೀಚೆಗೆ ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ಬೆಲೆ ಶೇ.20ರಷ್ಟು ಏರಿಕೆಯಾಗಿದೆ. ಸಂಘರ್ಷ ಮತ್ತಷ್ಟು ಉಲ್ಬಣವಾದಲ್ಲಿ ಬೆಲೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದ್ದು, ಇಡೀ ಪರಿಸ್ಥಿತಿ ಇರಾನ್ ನ ಪ್ರತಿದಾಳಿಯ ತೀವ್ರತೆಯನ್ನು ಅವಲಂಬಿಸಿದೆ ಎಂದು ತಜ್ಞರು ಹೇಳಿದ್ದಾರೆ.

ಮುಖ್ಯವಾಗಿ ಪರ್ಶಿಯನ್ ಕೊಲ್ಲಿಗೆ ಪ್ರವೇಶ ನೀಡುವ ಹೊರ್ಮಝ್ ಕೊಲ್ಲಿಯ ಸುತ್ತ ಆತಂಕದ ವಾತಾವರಣವಿದ್ದು, ಪ್ರತಿ ದಿನ ಇಲ್ಲಿ 15 ದಶಲಕ್ಷ ಬ್ಯಾರಲ್ ತೈಲ ಸಾಗಾಣಿಕೆಯಾಗುತ್ತದೆ. ಇದು ಜಾಗತಿಕ ಪೂರೈಕೆಯ ಶೇ.20ರಷ್ಟಾಗಿದೆ. ಈ ಮಾರ್ಗದ ಮೂಲಕ ಸೌದಿ ಅರೇಬಿಯಾ, ಕುವೈತ್, ಇರಾಕ್, ಕತಾರ್, ಬಹರೈನ್, ಯುಎಇ ಮತ್ತು ಇರಾನ್ ನಿಂದ ತೈಲ ಹಾಗೂ ಅನಿಲ ಪೂರೈಕೆಯಾಗುತ್ತದೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!