Friday, July 31, 2026
spot_imgspot_img
spot_imgspot_img

ಸಂಬಂಧಿಯ ಅಂತ್ಯಕ್ರಿಯೆಗೆ ಪಾಲ್ಗೊಳ್ಳಲು ಬಂದ ಇಬ್ಬರು ಮಸಣ ಸೇರಿದರು..! ಕಾರು ಕೆರೆಗೆ ಬಿದ್ದು ಇಬ್ಬರು ಸಾವು!

- Advertisement -
- Advertisement -

ಉತ್ತರಕನ್ನಡ: ಸಂಬಂಧಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಬರುತ್ತಿದ್ದ ವೇಳೆ ಪಟ್ಟಣದ ಅಮ್ಮಾಜಿ‌ ಕೆರೆಯಲ್ಲಿ ಕಾರು ಬಿದ್ದು ಇಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಮೃತರು ಮೂಲತಃ ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದ ನಿವಾಸಿಗಳಾಗಿದ್ದು,ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು. ತಾಲೂಕಿನ ಕರವಳ್ಳಿಯಲ್ಲಿ ಸಂಬಂಧಿಯ ಅಂತ್ಯಕ್ರಿಯೆಗಾಗಿ ಬೆಂಗಳೂರನಿಂದ ಬರುತ್ತಿದ್ದ ವೇಳೆ ಮುಂಜಾನೆ ಸಮಯ ಚಾಲಕನ ನಿಯಂತ್ರಣ ತಪ್ಪಿ ಮುಂಡಗೋಡದ ಅಮ್ಮಾಜಿ ಕೆರೆಯ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ.

ಮೃತರನ್ನುರಾಜು ವರ್ಗೀಸ್ ಹಾಗೂ ಬ್ಲೆಸಿ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಸಿಪಿಐ ಎಸ್.ಎಸ್ ಸಿಮಾನಿ, ಪಿಎಸ್‌ಐ ಎನ್.ಡಿ ಜಕ್ಕಣ್ಣ ಭೇಟಿ ನೀಡಿದರು. ಪೊಲೀಸ್ ಸಿಬ್ಬಂದಿಗಳು ಮತ್ತು ಅಗ್ನಿ ಶಾಮಕದಳದರು ಮೃತದೇಹವನ್ನು ಹೊರತೆಗೆಯಲಾಗಿದೆ. ಕಾರನ್ನು ಕ್ರೇನ್ ಮೂಲಕ ಮೇಲೆತ್ತಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!