Saturday, April 27, 2024
spot_imgspot_img
spot_imgspot_img

ವೀರಕಂಬ: ಮಜಿ ಹಿ.ಪ್ರಾ ಶಾಲಾ ಮಕ್ಕಳ ಪೋಷಕರ ಸಭೆ ಹಾಗೂ ನೂತನ ಶಾಲಾಭಿವೃದ್ಧಿ ಸಮಿತಿಯ ರಚನೆ; ನೂತನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸಂಜೀವ ಮೂಲ್ಯ ಮಜಿ ಆಯ್ಕೆ

- Advertisement -G L Acharya panikkar
- Advertisement -

ವೀರಕಂಬ: ಶಾಲೆಯು ಒಂದು ಗ್ರಾಮ ದ ಅಭಿವೃದ್ಧಿ ಗೆ ಹಿಡಿದ ಕನ್ನಡಿ ಆಗಿರುತ್ತದೆ. ಎಲ್ಲಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕ ವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತವೆಯೋ ಆಗ ಆ ಊರೇ ಅಭಿವೃದ್ಧಿ ಹೊಂದುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಮೊದಲ ಮೆಟ್ಟಿಲು ಶಾಲಾ ಶಿಕ್ಷಕರು ಮತ್ತು ಉತ್ತಮ ಶಾಲಾಭಿವೃದ್ಧಿ ಸಮಿತಿ. ಆದ್ದರಿಂದ ಉತ್ತಮ ಶಾಲಾ ಅಭಿವೃದ್ಧಿ ಸಮಿತಿ ರಚನೆ ಎಲ್ಲಾ ಪೋಷಕರ ಜವಾಬ್ದಾರಿ ಆಗಿರುತ್ತದೆ. ಎಂದು ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಯುತ ದಿನೇಶ್ ರವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ಶಾಲಾ ಮಕ್ಕಳ ಪೋಷಕರ ಸಭೆ ಹಾಗೂ ನೂತನ ಶಾಲಾ ಅಭಿವೃದ್ಧಿ ಸಮಿತಿಯ ರಚನೆಯ ಅಧ್ಯಕ್ಷತೆ ವಹಿಸಿ ಹಾಗೂ ಸರಕಾರದಿಂದ ಉಚಿತವಾಗಿ ನೀಡಲ್ಪಟ್ಟ ಪಠ್ಯಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು.

ಪಂಚಾಯತ್ ಉಪಾಧ್ಯಕ್ಷ ಶ್ರೀಮತಿ ಶೀಲಾ ವೇಗಸ್ ಹಾಗೂ ಸದಸ್ಯರಾದ ಶ್ರೀಮತಿ ಜಯಂತಿ ಜನಾರ್ಧನ್, ಶ್ರೀಮತಿ ಗೀತಾ ಜಯಶೀಲ ಗಾಂಭೀರ್, ಶ್ರೀಮತಿ ಮೀನಾಕ್ಷಿ ಸುನಿಲ್, ಶ್ರೀಮತಿ ಉಮಾವತಿ ಸಪಲ್ಯ, ಶ್ರೀ ಜಯಪ್ರಸಾದ್ ಇವರ ಉಪಸ್ಥಿತಿಯಲ್ಲಿ ನಡೆದ ನೂತನ ಶಾಲಾಭಿವೃದ್ಧಿ ಸಮಿತಿಯ ರಚನೆಯ ರೂಪರೇಷೆಗಳನ್ನು ಮುಖ್ಯಶಿಕ್ಷಕ ಶ್ರೀಯುತ ನಾರಾಯಣ ಪೂಜಾರಿ ಅವರು ಮಾಹಿತಿ ನೀಡಿದಾಗ ಈಗ ಪ್ರಸ್ತುತ ಇರುವ ಶಾಲಾಭಿವೃದ್ಧಿ ಸಮಿತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಮಜಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವಲ್ಲಿ ಬಹಳ ಶ್ರಮಪಟ್ಟಿದ್ದಾರೆ ಹಾಗೂ ಎಂ ಆರ್ ಪಿ ಎಲ್ ಇದರ ಸಿ ಆರ್ ಎಸ್ ಫಂಡ್ ನಿಂದ ಈಗಾಗಲೇ 10 ಶಾಲಾ ಕೊಠಡಿಗಳು ಪೂರ್ತಿ ಕೆಲಸವಾಗಿ ಕೇವಲ ಉದ್ಘಾಟನೆಗೆ ಬಾಕಿ ಇರುವಂತ ಸಂದರ್ಭದಲ್ಲಿ ಈಗಿರುವ ಶಾಲಾಭಿವೃದ್ಧಿ ಸಮಿತಿ ಮುಂದುವರಿಸಿ ಅದಕ್ಕೆ ಬಾಕಿ ಇರುವ ವಿವಿಧ ಮೀಸಲಾತಿ ಅನುಪಾತದ ಸದಸ್ಯರನ್ನು ಸೇರಿಸಿಕೊಂಡು ಮುಂದುವರಿಸುವಂತೆ ತಮ್ಮ ವಯಕ್ತಿಕ ಸಲಹೆಯನ್ನು ನೀಡಿದಾಗ ಪೋಷಕರ ಎಲ್ಲರೂ ಸಂಪೂರ್ಣ ಒಕ್ಕೊರಲಿನ ಅನುಮೋದನೆ ನೀಡಿದರು.

ಅದರಂತೆ ಮುಂದಿನ ಅವಧಿಗೆ ನೂತನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಶ್ರೀಯುತ ಸಂಜೀವ ಮೂಲ್ಯ ಮಜಿ, ಉಪಾಧ್ಯಕ್ಷರಾಗಿ ಶ್ರೀಮತಿ ವಿಜಯ ಶೇಖರ್ ಬೆತ್ತಸರವು ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಸದಸ್ಯರಾಗಿ ಶ್ರೀ ಗೋಪಾಲಕೃಷ್ಣ ಭಟ್ ದಿವಾನ, ಶ್ರೀ ಕೊರಗಪ್ಪ ನಾಯ್ಕ ಸಿಂಗೇರಿ, ವಾಮನ ಬಂಗೇರ ನೆಕ್ಕರಾಜೆ, ವಿಶ್ವನಾಥ್ ಎಮ್ಮೆ೯ಮಜಲು, ಶ್ರೀಮತಿ ಸಾವಿತ್ರಿಬೋಳಂಗಡಿ, ಶ್ರೀಮತಿ ಉಮಾವತಿ ಮಜಿ, ಶ್ರೀಮತಿ ವೀಣಾ ಮೈರ, ಶ್ರೀಮತಿ ವನಿತಾ ತಾಳಿತ್ತನೂಜಿ ,ಶ್ರೀ ಉಮ್ಮರ್ ಫಾರೂಕ್ ಕೊಡಪದವು ಮದಕ ,ಬಿಕೆ ಅಬ್ದುಲ್ ಮಜೀದ್ ವೀರಕಂಬ, ಶ್ರೀ ಸುರೇಶ್ ನಾಯ್ಕ ಬೆತ್ತಸರವು ಶ್ರೀ ಲಕ್ಷ್ಮಣಗೌಡ ನಂದನತಿಮಾರು, ಅಸ್ಲಿಮಾ ಕಂಪದಬೈಲು, ಶ್ರೀಮತಿ ರಂಜಿತಾ ಮಜಿ, ಶ್ರೀಮತಿ ಹರಿಣಾಕ್ಷಿ ಕೇಪುಲಕೊಡಿ, ಸರಿತಾಪ್ರಾಂಕ್ ಮಜಿ, ಆಯ್ಕೆಯಾದರು.

ಸಮಿತಿಯ ಕಾರ್ಯದರ್ಶಿಯಾಗಿ ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಪದನಿಮಿತ್ತ ಸದಸ್ಯರಾಗಿ ಸಹಶಿಕ್ಷಕಿ ಶಕುಂತಲಾ ಎಂ ಬಿ, ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಜ್ಯೋತಿ ಎನ್ ಕೆ ,ಪಂಚಾಯತ್ ಸದಸ್ಯೆ ಶ್ರೀಮತಿ ಜಯಂತಿ ಜನಾರ್ಧನ್, ಅಂಗನವಾಡಿ ಶಿಕ್ಷಕಿ ಶ್ರೀಮತಿ ಸುಮತಿ ,ಹಾಗೂ ಶಾಲಾ ವಿದ್ಯಾರ್ಥಿನಿ ಶ್ರೇಯ ಳನ್ನು ಆಯ್ಕೆ ಮಾಡಲಾಯಿತು.
ಶಾಲಾ ಶಿಕ್ಷಕಿ ಶ್ರೀಮತಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ರಾಘವೇಂದ್ರ ಶಿಕ್ಷಕಿಯರಾದ ಶ್ರೀಮತಿ ಸಿಸಿಲಿಯ, ಶ್ರೀಮತಿ ಶಕುಂತಲಾ, ಶ್ರೀಮತಿ ಅನುಷಾ, ಶ್ರೀಮತಿ ಮುಷೀ೯ದಾಬಾನು ಸಹಕರಿಸಿದರು.

driving
- Advertisement -

Related news

error: Content is protected !!