Sunday, July 12, 2026
spot_imgspot_img
spot_imgspot_img

ವಿಯೆಟ್ನಾಂ ದ್ವೀಪದಲ್ಲಿ 32 ಭಾರತೀಯ ಪ್ರವಾಸಿಗರಿದ್ದ ಬೋಟ್‌ ಮುಳುಗಡೆ – 15 ಮಂದಿ ಮೃತ್ಯು

- Advertisement -
- Advertisement -

ಹನೋಯ್: ವಿಯೆಟ್ನಾಂನ ಫು ಕ್ವಾಕ್‌ ದ್ವೀಪದ ಬಳಿಕ 32 ಮಂದಿ ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್‌ ಬೋಟ್‌ ಮುಳುಗಡೆಯಾಗಿದ್ದು, ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ.

ಶನಿವಾರ(ಜು.11) ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಬಳಿಯ ಹೊನ್ ಮೇ ರುಟ್ ನ್ಗೋಯ್ ಬಳಿ 36 ಭಾರತೀಯ ಭಾರತೀಯ ಪ್ರವಾಸಿಗರು, ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್ ಬೋಟ್ ಮಗುಚಿಬಿದ್ದಿದೆ. ಘಟನೆ ಬಳಿಕ ಸ್ಥಳೀಯ ಅಧಿಕಾರಿಗಳು ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ಘಟನೆಯಲ್ಲಿ 32 ಭಾರತೀಯರ ಪೈಕಿ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ವಿಯೆಟ್ನಾಂ ಅಧಿಕಾರಿಗಳು ಈವರೆಗೆ ಯಾವುದೇ ಜೀವಹಾನಿಯನ್ನು ದೃಢಪಡಿಸಿಲ್ಲ.

ಈ ಕುರಿತು ಎಕ್ಸ್‌ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೆಲ ಗಂಟೆಗಳ ಹಿಂದೆ ವಿಯೆಟ್ನಾಂನ ಫು ಕ್ವಾಕ್‌ ದ್ವೀಪದ ಬಳಿ ಹಲವಾರು ಭಾರತೀಯ ಪ್ರವಾಸಿಗರನ್ನ ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಡೆಯಾಗಿದೆ. ಸ್ಥಳೀಯ ಅಧಿಕಾರಿಗಳಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ನಿಖರ ಮಾಹಿತಿ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!