Sunday, June 14, 2026
spot_imgspot_img
spot_imgspot_img

30 ವರ್ಷ ಹಿಂದೆ 500 ರೂ ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿ ನಿವೃತ್ತಿಯಾದ 10 ವರ್ಷದ ಬಳಿಕ ಜೈಲು ಪಾಲು

- Advertisement -
- Advertisement -

ಬೆಳಗಾವಿ: 30 ವರ್ಷ ಹಿಂದೆ ಪಡೆದಿದ್ದ 500 ರೂ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತಿಯಾಗಿ 10 ವರ್ಷದ ಬಳಿಕ ಗ್ರಾಮ ಲೆಕ್ಕಾಧಿಕಾರಿ ಜೈಲು ಪಾಲಾಗಿರುವಂತಹ ಘಟನೆ ನಡೆದಿದೆ.

ನಾಗೇಶ್ ಶಿವಂಗೇಕರ್ ಜೈಲು ಪಾಲದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ. ಪ್ರಕರಣದ ದೂರುದಾರ ಮೃತಪಟ್ಟು ಐದು ವರ್ಷಗಳಾಗಿವೆ.

ನಾಗೇಶ್ ಶಿವಂಗೇಕರ್ 30 ವರ್ಷ ಹಿಂದೆ ಪಹಣಿ ಪತ್ರದಲ್ಲಿ ವಾಟ್ನಿ ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಲಕ್ಷ್ಮಣ ಕಟಾಂಬಳೆ ಎಂಬುವರಿಂದ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 500 ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

2006ರಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ಒಂದು ವರ್ಷ ಜೈಲು ಮತ್ತು 1 ಸಾವಿರ ರೂ ದಂಡ ವಿಧಿಸಲಾಗಿತ್ತು. ಬಳಿಕ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದ ನಾಗೇಶ್ ಶಿವಂಗೇಕರ್‌ಗೆ ರಿಲೀಫ್ ಸಿಕ್ಕಿತ್ತು. ಆದರೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಲೋಕಾಯುಕ್ತ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.

ಇಂದು ಸುಪ್ರೀಂ ಕೋರ್ಟ್ ನಿಂದ ಲೋಕಾಯುಕ್ತ ಪರ ತೀರ್ಪು ಪ್ರಕಟವಾಗಿದ್ದು, ಕೆಲಸದಿಂದ ನಿವೃತ್ತಯಾಗಿ 10 ವರ್ಷದ ಬಳಿಕ ಆರೋಪಿ ಮತ್ತೆ ಜೈಲು ಪಾಲಾಗಿದ್ದಾರೆ. ಬೆಳಗಾವಿ ಹಿಂಡಲಗಾ ಜೈಲಿಗೆ ನಾಗೇಶ್ ಶಿವಂಗೇಕರ್‌ನನ್ನು ಲೋಕಾಯುಕ್ತ ಪೊಲೀಸರು ರವಾನಿಸಿದ್ದಾರೆ.

- Advertisement -

Related news

error: Content is protected !!