Saturday, June 20, 2026
spot_imgspot_img
spot_imgspot_img

ಗ್ರಾಮ ಪಂಚಾಯತ್ ಚುನಾವಣೆ : ಬೆಳ್ಳಂ ಬೆಳ್ಳಗ್ಗೆ ಬಿರುಸಿನ ಮತದಾನ ಆರಂಭ

- Advertisement -
- Advertisement -

ಬಂಟ್ವಾಳ:ಗ್ರಾಮ ಪಂಚಾಯತ್ ನ ಅಧಿಕಾರಕ್ಕಾಗಿ ಇಂದು ಮತದಾನ ನಡೆಯುತ್ತಿದ್ದು ಬೆಳಿಗ್ಗೆ 7 ಕ್ಕೆ ಸರಿಯಾಗಿ ಮತದಾನ ಆರಂಭವಾಗಿದೆ. ಗ್ರಾಮದ ಅಭಿವೃದ್ದಿಗಾಗಿ ಅಯಾಯ ವ್ಯಾಪ್ತಿಯ ನಾಯಕರುಗಳ ಆಯ್ಕೆಗಾಗಿ ನಡೆದ ಕಸರತ್ತುಗಳಿಗೆ ಇಂದು ಅಂತಿಮ ತೆರೆಯಾಗಿದೆ.

ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಒಂದನ್ನು ಹೊರತುಪಡಿಸಿ ಉಳಿದಂತೆ 57 ಗ್ರಾಮ ಪಂಚಾಯತ್ ಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ . ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಜೊತೆಗೆ ಪೋಲಿಸ್ ಸಂಪೂರ್ಣ ವ್ಯವಸ್ಥೆ ಯಲ್ಲಿ ಪಕ್ಷಾತೀತವಾಗಿ ನಡೆಯುವ ಗ್ರಾಮ ಪಂಚಾಯತ್ ಚುನಾವಣೆ ಶಾಂತಿಯುತ ವಾಗಿ ಆರಂಭವಾಗಿದೆ.

ತೆಂಕ ಎಡಪದವು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಪಂಚಾಯತ್ ಚುನಾವಣಾ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು.

- Advertisement -

Related news

error: Content is protected !!