Monday, June 22, 2026
spot_imgspot_img
spot_imgspot_img

ವಿಟ್ಲ-ಬೊಬ್ಬೆಕೇರಿಯಲ್ಲಿ ಕಾರ್ ಮತ್ತು ಬೈಕ್ ಅಪಘಾತ- ಬೈಕ್ ಸವಾರನಿಗೆ ಗಾಯ

- Advertisement -
- Advertisement -


ವಿಟ್ಲ(ನ.4): ವಿಟ್ಲ -ಬೊಬ್ಬೆಕೇರಿ ರಸ್ತೆಯಲ್ಲಿ ಇಂದು ಸಂಜೆ ಕಾರ್ ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ. ಬೈಕ್ ಸವಾರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ ಚಾಲಕನು ಮಂಗಳೂರು ರಸ್ತೆ ಕಡೆಯಿಂದ ವಿಟ್ಲಕ್ಕೆ ಹೋಗುತ್ತಿದ್ದು ಅದೇ ರೀತಿ ಬೈಕ್ ಸವಾರನು ವಿಟ್ಲ ದೇವಸ್ಥಾನ ರಸ್ತೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!