Saturday, April 20, 2024
spot_imgspot_img
spot_imgspot_img

ಕಾಂಗ್ರೆಸ್ ಮತ್ತು ಎಸ್ ಡಿ ಪಿ ಐ ಕಾರ್ಯಕರ್ತರ ನಡುವೆ ಘರ್ಷಣೆ: ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು!

- Advertisement -G L Acharya panikkar
- Advertisement -

ವಿಟ್ಲ: ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭ ಪ್ರಚಾರ ನಡೆಸಿದ ವಿಚಾರವಾಗಿ ಇಡ್ಕಿದು ಗ್ರಾಮದ ಕೋಲ್ಪೆ ಎಂಬಲ್ಲಿ ಕಾಂಗ್ರೆಸ್ ಮತ್ತು ಎಸ್ ಡಿ ಪಿ ಐ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಕೋಲ್ಪೆ ನಿವಾಸಿ ಇಬ್ರಾಹಿಂ ಬಾತೀಷ ಅವರು ನೀಡಿದ ದೂರಿನಂತೆ ಆರೋಪಿಗಳಾದ ಕೋಲ್ಪೆ ನಿವಾಸಿಗಳಾದ ಸಲೀಂ, ನಾಸೀರ್‌, ಅಬ್ದುಲ್‌ ಹಕೀಂ, ಅಬ್ದುಲ್‌ ಕುಂಞ , ರಸೀದ್‌, ಮಹಮ್ಮದ್‌ ತಮೀಜ್‌ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಾತಿಷ್ ಅವರು ಗ್ರಾಮ ಪಂಚಾಯತ್‌ ಚುನಾವಣಾ ಫಲಿತಾಂಶ ಮುಗಿಸಿ ತನ್ನ ಮನೆಗೆ ಬಂದಿದ್ದರು. ಇಲ್ಲಿಗೆ ಬಂದ ಆರೋಪಿಗಳಾದ ಸಲೀಂ, ನಾಸೀರ್‌, ಅಬ್ದುಲ್‌ ಹಕೀಂ, ಅಬ್ದುಲ್‌ ಕುಂಞ, ರಸೀದ್‌ ಮತ್ತು ಮಹಮ್ಮದ್‌ ತಮೀಜ್‌ ಎಂಬವರು ಮನೆಯ ಒಳಗೆ ಪ್ರವೇಶಿಸಿ ಬಾತಿಷ್ ಅವರಲ್ಲಿ ನೀನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಸ್‌ಡಿಪಿಐ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಎಸ್‌ಡಿಪಿಐಗೆ ಬಾರೀ ಸಪೋರ್ಟ್‌ ಮಾಡುತ್ತೀಯಾ ಎಂದು ಹೇಳಿ ಸಲೀಂ ಎಂಬಾತನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ತಲವಾರನ್ನು ಬಿಸಿದ್ದು ತಲವಾರು ತುದಿ ಬಾತಿಷ್ ಅವರ ಎಡ ಕಣ್ಣಿನ ಮೇಲ್ಬಾಗಕ್ಕೆ ತಾಗಿ ಕೆಳಕ್ಕೆ ಬಿದ್ದಿದ್ದು, .ಬಳಿಕ ನಾಸೀರ್‌,ಅಬ್ದುಲ್‌ ಹಕೀಂ,ಅಬ್ದುಲ್‌ ಕುಂಞ, ರಸೀದ್‌ ಮತ್ತು ಮಹಮ್ಮದ್‌ ತಮೀಜ್‌ ಕಾಲಿನಿಂದ ತುಳಿದಿದ್ದಾರೆ ಎಂದು ಆರೋಪಿಸಲಾಗಿದೆ. ನೆರೆಕರೆಯವರು ಹಲ್ಲೆ ಮಾಡುವುದನ್ನು ತಪ್ಪಿಸಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಗಾಯಾಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿದೂರು: ಕೋಲ್ಪೆ ನಿವಾಸಿ ಹಕೀಂ ಯಾನೆ ಅಬ್ದುಲ್‌ ಹಕೀಂ ಅವರು ನೀಡಿದ ದೂರಿನಂತೆ ಆರೋಪಿಗಳಾದ ಅಜನಾಸ್‌, ಬಾತೀಷ್‌, ಬಶೀರ್‌,ಇರ್ಪಾನ್‌, ಸುಲೈಮಾನ್‌, ಅನ್ಸಾರ್‌ ಯಾನೆ ಅಂಚು, ಅಫ್ರೀಜ್‌, ಅಬೂಬಕ್ಕರ್‌ ಕೋಲ್ಪೆ ಹಾಗೂ ಇತರ ವಿರುದ್ಧ ಪ್ರಕರಣ ದಾಖಲಾಗಿದೆ.

ಪಂಚಾಯತ್‌ ಚುನಾವಣೆಯಲ್ಲಿ ಪ್ರಚಾರ ಮಾಡಿದ ಪರಿಣಾಮ ಶಾಕೀರ್‌ ಎಂಬಾತನು ಚುನಾವಣೆಯಲ್ಲಿ ಸೋತ ಬಗ್ಗೆ ಕೋಪದಿಂದ ಆರೋಪಿಗಳಾದ ಅಜನಾಸ್‌ ,ಬಾತೀಷ್‌ ,ಬಶೀರ್‌, ಇರ್ಪಾನ್‌, ಸುಲೈಮಾನ್‌, ಅನ್ಸಾರ್‌ ಯಾನೆ ಅಂಚು, ಅಫ್ರೀಜ್‌, ಅಬೂಬಕ್ಕರ್‌ ಕೋಲ್ಪೆ ಹಾಗೂ ಇತರರು ಇಡ್ಕಿದು ಗ್ರಾಮದ ಕೋಲ್ಪೆ ಎಂಬಲ್ಲಿ ಅಕ್ರಮ ಕೂಟ ಸೇರಿ ಮಾರಕಾಯುಧಗಳನ್ನು ಕೈಯಲ್ಲಿ ಹಿಡಿದುಕೊಂಡು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಕೀಂ ಅವರನ್ನು ತಡೆದು ನಿಲ್ಲಿಸಿ ಕೈಗಳಿಂದ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು,. ಬಿಡಿಸಲು ಬಂದು ಸಲೀಂನ ಕಾರಿಗೆ ಜಖಂ ಉಂಟು ಮಾಡಿ ರೂ 2000/-ನಷ್ಟಉಂಟು ಮಾಡಿದ್ದಲ್ಲದೇ ಗಲಾಟೆಯನ್ನು ಇತರರು ಬಿಡಿಸಲು ಬಂದಾಗ ಆರೋಪಿಗಳು ಇನ್ನೂ ಮುಂದೆ ನೀನು ಶಾಕೀರನ ವಿರುದ್ದವಾಗಿ ಚುನಾವಣೆ ಪ್ರಚಾರ ಮಾಡಿದ್ದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!