Saturday, June 6, 2026
spot_imgspot_img
spot_imgspot_img

ಹಳ್ಳದಲ್ಲಿ ತೇಲಿ ಬಂದ ಏಳು ಭ್ರೂಣಗಳ ಮೃತದೇಹ

- Advertisement -
- Advertisement -

ಬೆಳಗಾವಿ: ಇದು ರಾಜ್ಯವೇ ಬೆಚ್ಚಿಬೀಳಿಸುವ ಸುದ್ದಿ ಇದಾಗಿದೆ. ನಗರದ ಹಳ್ಳದಲ್ಲಿ ಬಿದ್ದ ಡಬ್ಬದಲ್ಲಿ 7 ಮೃತ ಭ್ರೂಣಗಳು ಪತ್ತೆಯಾಗಿದ್ದು, ಸ್ಥಳೀಯ ಜನರು ಕಂಡು ಶಾಕ್‌ ಆದ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ಹಳ್ಳದ ದಂಡೆಯಲ್ಲಿ ಬಿದ್ದಿದ್ದ ಡಬ್ಬಗಳಲ್ಲಿ ಹಾಕಿ ಎಸೆದಿರುವ ಘಟನೆ ಬೆಳಕಿಗೆ ಬಂದಿದ್ದು, ಮೃತ ಭ್ರೂಣಗಳನ್ನು ಯಾರು ಎಸೆದರು..? ಯಾಕೆ ಎಸೆದರು..? ಎನ್ನುವುದು ಇನ್ನೂ ನಿಗೂಢವಾಗಿದೆ. ಮೃತ ಭ್ರೂಣಗಳನ್ನು ಕಂಡು ಮೂಡಲಗಿಯ ಜನ ಬೆಚ್ಚಿ ಬಿದ್ದಿದ್ದಾರೆ.

ಈಗಾಗಲೇ ಸ್ಥಳಕ್ಕೆ ಮೂಡಲಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಏಕ ಕಾಲಕ್ಕೆ ಏಳು ಮೃತ ಭ್ರೂಣಗಳು ಕಂಡು ಬಂದಿರುವುದು ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು, ಮೂಡಲಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ.

 ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದೇನು?

ಮೂಡಲಗಿ ಪಟ್ಟಣದ ಹಳ್ಳದಲ್ಲಿ ಮೃತ ಭ್ರೂಣಗಳು ಪತ್ತೆ ವಿಚಾರವಾಗಿ ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿ (ಡಿಎಚ್‌ಒ) ಡಾ. ಮಹೇಶ್ ಕೋಣೆ ಮಾತನಾಡಿದ್ದಾರೆ: ಪ್ರಾಥಮಿಕವಾಗಿ ನೋಡಿದ್ರೇ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯಾಗಿದೆ ಅಂತಾ ಹೇಳಬಹುದು. ಫೋಟೋಗಳನ್ನ ನೋಡಿದ್ರೇ ಐದು ತಿಂಗಳ ಮೇಲಿರುವ ಬೇಬಿ ಅಂತಾ ಗೊತ್ತಾಗುತ್ತೆ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.

ಐದು ಬಾಟಲಿಗಳಲ್ಲಿ ಏಳು ಭ್ರೂಣಗಳು ಸಿಕ್ಕಿವೆ. ಸ್ಥಳೀಯ ವೈದ್ಯರಿಗೆ ತಿಳಿಸಿದ ಕೂಡಲೇ ಬಾಟಲ್ ಗಳನ್ನ ತಂದು ಮೂಡಲಗಿ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿಟ್ಟಿದ್ದಾರೆ. ಪುರಸಭೆ ಅಧಿಕಾರಿಗಳಿಂದ ಪೊಲೀಸ್ ಠಾಣೆಯಲ್ಲಿ ದೂರು ಕೊಡಿಸುತ್ತೇವೆ. ನಂತರ ಬೆಳಗಾವಿ ವಿಧಿವಿಜ್ಞಾನ ವಿಭಾಗಕ್ಕೆ ಶಿಫ್ಟ್​ ಮಾಡುತ್ತೇವೆ. ಜಿಲ್ಲಾಧಿಕಾರಿಗಳ ಜತೆಗೆ ಚರ್ಚೆ ಮಾಡಿ, ಒಂದು ತನಿಖೆ ತಂಡ ರಚನೆ ಮಾಡುತ್ತೇವೆ. ಇದರ ಹಿಂದೆ ಯಾರಿದ್ದಾರೆ ಅಂತಾ ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

- Advertisement -

Related news

error: Content is protected !!