Sunday, May 5, 2024
spot_imgspot_img
spot_imgspot_img

ವಿಟ್ಲ: ಯಾರ ಪಾಲಾಗುತ್ತೆ ಪಟ್ಟಣ ಪಂಚಾಯತ್ ಅಧಿಕಾರ..?! ಕೈ – ಕಮಲ – SDPI ನಡುವೆ ತ್ರಿಕೋನ ಸ್ಪರ್ಧೆ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla
vtv vitla

ವಿಟ್ಲ: ಬಹಳ ಕುತೂಹಲದ ಕ್ಷೇತ್ರಗಳಲ್ಲಿ ಒಂದಾಗಿರುವ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಇಲ್ಲಿನ ಬಿಜೆಪಿ, ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ನಡುವೆ ಹಾವು ಏಣಿ ಆಟ ಈಗಾಗಲೇ ಶುರುವಾಗಿದೆ, 18 ವಾರ್ಡ್ಗಳಲ್ಲಿ ಚುನಾವಣೆ ನಡೆಯಲಿದ್ದು ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಣಕ್ಕೆ ಇಳಿಯುವ ರೂಪುರೇಷೆ ಈಗಾಗಲೇ ಅಂತಿಮ ಹಂತದಲ್ಲಿದೆ.

18 ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದ್ದು, ಕಳೆದ ಬಾರಿ ಪಂಚಾಯತ್ ಬಿಜೆಪಿ ತೆಕ್ಕೆಗೆ ಬಂದಿತ್ತು. 18 ರಲ್ಲಿ 12 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಗಳಾಗಿದ್ದರು. ಕಳೆದ ಚುನಾವಣೆಯಲ್ಲಿ ಎಸ್ ಡಿ ಪಿ ಐ ಖಾತೆ ತೆರೆಯಲಿಲ್ಲ. ಆದರೆ ಈ ಬಾರಿ ಎಸ್ ಡಿಪಿಐ 8 ಅಭ್ಯರ್ಥಿಗಳು ಕಣಕ್ಕೆ ಇಳಿಯುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಶೋಕ್ ಕುಮಾರ್ ಶೆಟ್ಟಿ ಈ ಬಾರಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದು ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

vtv vitla
vtv vitla
vtv vitla

ನಾಮಪತ್ರಸಲ್ಲಿಕೆಗೆ ಡಿಸೆಂಬರ್ 15 ಕೊನೆಯ ದಿನಾಂಕವಾಗಿದೆ. ಈ ಬಾರಿ ಅಭ್ಯರ್ಥಿಗಳಾಗಿ ಅರುಣ್ ವಿಟ್ಲ, ರವಿಪ್ರಕಾಶ್ ವಿಟ್ಲ, ರಮಾನಾಥ ವಿಟ್ಲ, ಮೂಸ ಕುಂಞ, ಅಶೋಕ್ ಕುಮಾರ್ ಶೆಟ್ಟಿ, ವಿಕೆ ಎಂ ಅಶ್ರಫ್ ಇನ್ನೂ ಹಲವಾರು ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ಇನ್ನು ಪಕ್ಷದಿಂದ ಅಸಮಾಧಾನಗೊಂಡು ಸ್ಪರ್ಧೆಗಿಳಿಯದ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.

ಡಿ. 27 ರಂದು ಚುನಾವಣೆ ನಡೆಯಲಿದ್ದು ಡಿ. 30 ಕ್ಕೆ ಮತದಾನ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಈ ಬಾರಿಯ ಪಟ್ಟಣ ಪಂಚಾಯತ್ ಎಲೆಕ್ಷನ್ ಬಹಳ ಕುತೂಹಲದಿಂದ ಕೂಡಿದ್ದು, ವಿಟ್ಲದ ಮತದಾನ ಬಾಂಧವರು ಯಾರ ಕೈ ಹಿಡಿಯುತ್ತಾರೆ ಎಂಬುವುದು ಕಾದುನೋಡಬೇಕಾಗಿದೆ.

vtv vitla
- Advertisement -

Related news

error: Content is protected !!