ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲದಲ್ಲಿ ರೈತ ಸಂಪರ್ಕ ಭವನ ತೆರೆಯಲಿದೆ. ಸುಮಾರು 50 ಲಕ್ಷ ಅನುದಾನದ ರೈತ ಸಂಪರ್ಕ ಭವನದ ಸ್ಥಳವನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರು ಪರಿಶೀಲನೆ ನಡೆಸಿದ್ದಾರೆ.ಬಳಿಕ ಶಾಸಕರು ಮಾತನಾಡಿ ಸುಮಾರು ಐವತ್ತು ಲಕ್ಷರೂಪಾಯಿ ವೆಚ್ಷದಲ್ಲಿ ನಿರ್ಮಾಣ ವಾಗಲಿರುವ ರೈತ ಸಂಪರ್ಕ ಕೇಂದ್ರದ ಶಿಲನ್ಯಾಸ ನಡೆಸುವ ತಯಾರಿಯಲ್ಲಿ ನಾವಿದ್ದೇವೆ. ಒಟ್ಟು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಹೋಬಳಿಗಳು ಬರುತ್ತದೆ.
ಪುತ್ತೂರು, ವಿಟ್ಲ, ಉಪ್ಪಿನಂಗಡಿ ಹೋಬಳಿಗಳಲ್ಲಿ ತಲಾ ಒಂದೊಂದು ರೈತ ಸಂಪರ್ಕ ಕೇಂದ್ರ ನಿರ್ಮಾಣ ನಡೆಯಲಿದೆ. ಅದಕ್ಕಾಗಿ ತಲಾ ೫೦ ಲಕ್ಷರೂಪಾಯಿ ಅನುದಾನ ಪಾಸಾಗಿದೆ. ರೈತರಿಗೆ ಬೇಕಾಗುವ ಯಂತ್ರೋಪಕರಣಗಳು, ಕೃಷಿ ಸಾಮಾಗ್ರಿಗಳು, ಕೃಷಿ ಮಾಹಿತಿ ಈ ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯಲಿದೆ.ವಿಟ್ಲ ಹೋಬಳಿಯ ರೈತಾಪಿ ವರ್ಗ ಈ ಸಂಪರ್ಕ ಕೇಂದ್ರದ ಮುಖಾಂತರ ಕೃಷಿಚಟುವಟಿಕೆಯನ್ನು ಹಾಗೂ ಕೃಷಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರ ಜೊತೆ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅರುಣ್ ವಿಟ್ಲ ,ಬಿಜೆಪಿ ಮುಖಂಡರಾದ ಹರಿಪ್ರಸಾದ್ ಯಾದವ್,ದಯಾನಂದ್ ಶೆಟ್ಟಿ ಉಜುರೆಮಾರು,ಮನೋಹರ್ ಶೆಟ್ಟಿ ಪೆರುವಾಯಿ,ಕೃಷ್ಣ ಚಂದಳಿಕೆ ಉಪಸ್ಥಿತರಿದ್ದರು.