Monday, May 20, 2024
spot_imgspot_img
spot_imgspot_img

ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ- ಸಾಂಸ್ಕೃತಿಕ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಪ್ರಯುಕ್ತ ಜ.14 ರಿಂದ 22 ರ ವರೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ ಜ.14 ನೇ ಆದಿತ್ಯವಾರ.ಸಂಜೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಬಂಗಾರು ಅರಸರು ವಿಟ್ಲ ಅರಮನೆ ಅನುವಂಶೀಕ ಮೊಕ್ತೇಸರರು ಇವರು ನೆರವೇರಲಿಸಲಿದ್ದಾರೆ.

ದಿನಾಂಕ 14-01-2024ನೇ ಆದಿತ್ಯವಾರ ಸಂಜೆ ಗಂಟೆ 6:30ರಿಂದ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗ “ಭಜನ್ ಸಂಧ್ಯಾ” ,
ನಂತರ ರಾತ್ರಿ ಗಂಟೆ 7:30ರಿಂದ ಬಿಲ್ಲವ ಸಂಘ (ರಿ.) ವಿಟ್ಲ ಮತ್ತು ಬಿಲ್ಲವ ಮಹಿಳಾ ಘಟಕ , ಯುವ ವಾಹಿನಿ, ವಿಟ್ಲ ಘಟಕ ಶಿವಗಿರಿ – ಪೊನ್ನೊಟ್ಟು, ಇದರ ಪಾಯೋಜಕತ್ವದಲ್ಲಿ ಚಾಪರ್‍ಕ್ ಕಲಾವಿದರಿಂದ ಈ ವರ್ಷದ ವಿಭಿನ್ನ ಶೈಲಿಯ ನಾಟಕ, ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಇವರು ರಚಿಸಿ ನಟಿಸಿ ನಿರ್ದೇಶಿಸಿರುವ “ಪುದರ್ ದೀದಾಂಡ್ ತುಳು ನಾಟಕ ನಡೆಯಲಿದೆ.

ದಿನಾಂಕ 15-01-2024ನೇ ಸೋಮವಾರ ಸಂಜೆ ಗಂಟೆ 7:30ರಿಂದ ಸಮರ್ಪಣ್ ವಿಟ್ಲ ಅರ್ಪಿಸುವ ಅಭಿನಯ ಕಲಾವಿದರು ಉಡುಪಿ ಅಭಿನಯಿಸಿರುವ ತುಳು ಹಾಸ್ಯಮಯ ನಾಟಕ “ಶಾಂಭವಿ” ನಡೆಯಲಿದೆ.

ದಿನಾಂಕ 16-01-2024ನೇ ಮಂಗಳವಾರ ಸಂಜೆ 6:00 ರಿಂದ ಮಕ್ಕಳ ತಂಡ ಉರಿಮಜಲು ಇವರಿಂದ “ಸ್ವರ ತರಂಗ” (ಸುಗಮ ಸಂಗೀತ) , ಸಂಜೆ ಗಂಟೆ 7:30ರಿಂದ ನೃತ್ಯೋಪಾಸನಾ ಕಲಾಕೇಂದ್ರ (ರಿ.) ಪುತ್ತೂರು ಇದರ ವಿಟ್ಲ ಶಾಖೆ, ಪ್ರಸ್ತುತ ಪಡಿಸುವ ಗುರು ವಿದುಷಿ ಶಾಲಿನಿ ಅತ್ಯಭೂಷಣ್ ನೃತ್ಯ ನಿರ್ದೇಶನದಲ್ಲಿ “ನೃತ್ಯೋಹಂ” ನಡೆಯಲಿದೆ.

ದಿನಾಂಕ 17-01-2024ನೇ ಬುಧವಾರ : ರಾತ್ರಿ ಗಂಟೆ 7:00 ರಿಂದ ಲಲಿತಕಲಾ ಸದನ ವಿಟ್ಲ, ಇದರ ನೃತ್ಯ ನಿರ್ದೇಶಕಿ ವಿದುಷಿ ನಯನಾ ಸತ್ಯನಾರಾಯಣ ವಿಟ್ಲ ಇವರ ಶಿಷ್ಯವೃಂದದಿಂದ “ನೃತ್ಯ ವೈಭವ” ಹಾಗೂ ನೃತ್ಯ ರೂಪಕ-‘ಭಷ್ಕಾಸುರ ಮೋಹಿನಿ’ ನಡೆಯಲಿದೆ.

ದಿನಾಂಕ 18-01-2024ನೇ ಗುರುವಾರ ಸಂಜೆ ಗಂಟೆ 7:00ಕ್ಕೆ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ.) ಕಲ್ಲಡ್ಕ ವಿದುಷಿ ವಿದ್ಯಾ ಮನೋಜ್ ಕಲ್ಲಡ್ಕ ಇವರ ಶಿಷ್ಯಯರಿಂದ “ಭರತನಾಟ್ಯ”, ರಾತ್ರಿ ಗಂಟೆ 9:00ರಿಂದ ಊರ-ಪರವೂರ ಕಲಾವಿದರಿಂದ “ರಸಮಂಜರಿ” ನಡೆಯಲಿದೆ.

ದಿನಾಂಕ 19-01-2024ನೇ ಶುಕ್ರವಾರ ಸಂಜೆ ಗಂಟೆ 5:00 ರಿಂದ ಸುಪ್ರಸಿದ್ಧ ಗಾಯಕರು ಡಾ. ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾಕೇಂದ್ರ (ರಿ.) ಪುತ್ತೂರು, ಇದರ ವಿಟ್ಲ ಶಾಖೆ ಪ್ರಸ್ತುತ ಪಡಿಸುವ “ಸುಮಧುರ ಸಂಗೀತ ಲಹರಿ”, ಆರ್. ಕೆ. ಆರ್ಟ್ಸ್ ಚಿಣ್ಣರ ಮನೆ (ರಿ.) ವಿಟ್ಲ. ಇವರಿಂದ ಸಂಜೆ ಗಂಟೆ 7:00ರಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ನಿರ್ದೇಶನದ”ನೃತ್ಯ=ಸಂಭ್ರಮ 2024″ ನಡೆಯಲಿದೆ.

ದಿನಾಂಕ 20-01-2024ನೇ ಶನಿವಾರ ಸಂಜೆ ಗಂಟೆ 6:30ಕ್ಕೆ ಯಕ್ಷಭಾರತ ಸೇವಾ ಪ್ರತಿಷ್ಠಾನ(ರಿ.) ವಿಟ್ಲ ಇವರಿಂದ ಕುಶ-ಲವರ ಕಾಳಗ ಮತ್ತು ಅಗ್ರಪೂಜೆ ಎಂಬ ಪೌರಾಣಿಕ ಯಕ್ಷಗಾನ ಸಂಜೆ ಗಂಟೆ 7:30ಕ್ಕೆ ವಿ.ಆರ್.ಸಿ. ವಿಟ್ಲ ಅರ್ಪಿಸುವ, “ನಿಟ್ಟೋತ್ಸನ – 2024” ನಡೆಯಲಿದೆ.

ದಿನಾಂಕ 21-01-2024ನೇ ಆದಿತ್ಯವಾರ 4:00 ರಿಂದ 7:00 ರವರೆಗೆ ಆಮಂತ್ರಣ “ಭಕ್ತಿ ಸುಗಂಧ” ರಾತ್ರಿ ಗಂಟೆ 9:30ಕ್ಕೆ “ಮಹಾ ರಥೋತ್ಸವ” ನಡೆದು ಬಳಿಕ ರಥೋತ್ಸವದ ಬಳಿಕ ವಿಟ್ಲ ಸರಕಾರಿ ಮಾದರಿ ಶಾಲಾ ವಠಾರದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲ್ಕಿ “ನಾಡೂರು ನಾಗಭವನ”ತುಳು ಕಥಾಭಾಗವನ್ನು ಬಯಲಾಟವಾಗಿ ಆಡಿತೋರಿಸಲಿರುವರು.

ದಿನಾಂಕ 22-01-2024ನೇ ಸೋಮವಾರ ಸಂಜೆ ಗಂಟೆ 6:00ರಿಂದ ಯಕ್ಷ ಮಿತ್ರರು ವಿಟ್ಲ ವಾಟ್ಸ್‌ಪ್ ಬಳಗದವರ ಸಹಕಾರದೊಂದಿಗೆ ಮುರಾರಿ ಭಟ್ ಪಂಜಗದ್ದೆ ಇವರ ಸಂಯೋಜನೆಯ “ಯಕ್ಷ-ಗಾನ-ನಾಟ್ಯ-ರಂಜನೆ” ನಡೆದು ಸಂಜೆ ಗಂಟೆ 8:00ಕ್ಕೆ ಪಂಚಶ್ರೀ ಗ್ರೂಪ್ (ರಿ.) ವಿಟ್ಲ ಅರ್ಪಿಸುವ, “ಸ್ಟಾರ್‌ನೈಟ್” ನಡೆಯಲಿದೆ.

- Advertisement -

Related news

error: Content is protected !!