Saturday, May 18, 2024
spot_imgspot_img
spot_imgspot_img

ವಿಟ್ಲ: ನೃತ್ಯ ಸಂಗಮ ನ್ಯಾಷನಲ್ ಅವಾರ್ಡ್ ಜೊತೆ ಕನ್ನಡ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆ ಬರೆದ ನಿರೀಕ್ಷಾ ಶೆಟ್ಟಿ ವಿಟ್ಲ

- Advertisement -G L Acharya panikkar
- Advertisement -

ರಾಮನಾಥ ಪುರ ಶ್ರೀ ರಾಮೇಶ್ವರ ದೇವಾಲಯದ ಕಾವೇರಿ ನದಿಯ ನೀರಿನ ಮೇಲಿನ ವೇದಿಕೆಯಲ್ಲಿ ನೃತ್ಯ ಮಾಡುವುದರ ಮೂಲಕ ನೃತ್ಯ ಸಂಗಮ ನ್ಯಾಷನಲ್ ಅವಾರ್ಡ್ ಜೊತೆ ಕನ್ನಡ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ನಿರೀಕ್ಷಾ ಶೆಟ್ಟಿ ವಿಟ್ಲ. ಕಾರ್ಯಕ್ರಮ ದಲ್ಲಿ ಗಿನ್ನಿಸ್ ದಾಖಲೆ ಪಡೆದ ಭರತನಾಟ್ಯ ಕಲಾವಿದೆ ಡಾ.ಸ್ವಾತಿ ಪಿ. ಭಾರದ್ವಾಜ್, ಕರ್ನಾಟಕ ಬುಕ್ ಆಫ್ ರೆಕಾರ್ಡ್ ನ ಡ.ಹರಿಕೃಷ್ಣ ಮಾರೆಮ್ , ಶಾಸಕ ಮಂಜು , ಸ್ವತಂತ್ರ್ಯ ಬಸವಲಿಂಗ ಸ್ವಾಮೀಜಿ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ವಿಟ್ಲ ಸಮೀಪದ ಪಡಾರಿನ ಗೋಪಾಲ ಶೆಟ್ಟಿ ಹಾಗೂ ಬಬಿತ ದಂಪತಿಗಳ ಮಗಳಾದ ನಿರೀಕ್ಷಾ ಶೆಟ್ಟಿ. ಸೈಂಟ್ ರೀಟಾ ಆಂಗ್ಲ ಮಾದ್ಯಮ ಶಾಲೆಯಲ್ಲಿ 5 ನೇ ತರಗತಿ ಓದುತ್ತಿದ್ದಾಳೆ. ನಿರೀಕ್ಷಾ ಶೆಟ್ಟಿ ನೃತ್ಯ ಹಾಗೂ ಯಕ್ಷಗಾನ ತರಬೇತಿಯನ್ನು ಪಡೆಯುತ್ತಿದ್ದು, ಈಕೆ ಬಾಲಪ್ರತಿಭಾ ಪುರಸ್ಕಾರ, ಪುಟಾಣಿ ಪಂಟರ್ ಗೌರವ ಪ್ರಶಸ್ತಿ, ಮಂಜುನಾಥ ಸ್ವಾಮಿ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ಕುಲ ತಿಲಕ ಪ್ರಶಸ್ತಿ, ವಾಯ್ಸ್ ಆಫ್ ಆರಾಧನಾ ಅವಾರ್ಡ್, ಜನಸ್ಪಂಧನ ಕರುನಾಡ ಸಿರಿ ರತ್ನ ಪ್ರಶಸ್ತಿ, ಕಲಾರತ್ನ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಷದ ಸಾಧಕ ರತ್ನ ಪ್ರಶಸ್ತಿ, ಚೈತನ್ಯ ಶ್ರೀ ಕರುನಾಡ ರತ್ನ ಪ್ರಶಸ್ತಿ, ಪ್ರತಿಭಾ ಚೇತನ ರಾಜ್ಯ ಪ್ರಶಸ್ತಿ ಗಳನ್ನು ಪಡೆದಿರುತ್ತಾಳೆ ಮತ್ತು ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾಳೆ ಹಾಗೂ 150 ಮಿಗಿಲಾಗಿ ನೃತ್ಯ ಪ್ರದರ್ಶನ ನೀಡುವುದರ ಜೊತೆಗೆ ಹಲವಾರು ಬಹುಮಾನ ಗಳನ್ನು ಪಡೆದಿರುತ್ತಾಳೆ.

- Advertisement -

Related news

error: Content is protected !!