Friday, May 17, 2024
spot_imgspot_img
spot_imgspot_img

ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾಗಿ ರಶೀದ್ ವಿಟ್ಲ, ಕಾರ್ಯದರ್ಶಿಯಾಗಿ ಹನೀಫ್ ಕುದ್ದುಪದವು

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಸಮೀಪದ ಉಕ್ಕುಡ ಬದ್ರಿಯಾ ಜುಮಾ ಮಸೀದಿ ಅಧೀನದ ನೂರುಲ್ ಹುದಾ ಎಜುಕೇಶನ್ ಸೆಂಟರ್ ಆಡಳಿತದಲ್ಲಿ ಮುನ್ನಡೆಯುತ್ತಿರುವ ಉಕ್ಕುಡ ಪಬ್ಲಿಕ್ ಸ್ಕೂಲ್ ಇದರ ನೂತನ ಅಧ್ಯಕ್ಷರಾಗಿ ರಶೀದ್ ವಿಟ್ಲ ಅವರನ್ನು ನೇಮಿಸಲಾಗಿದೆ. ಗೌರವಾಧ್ಯಕ್ಷರಾದ ಕುಂಬೋಲ್ ಕೆ.ಎಸ್. ಆಟಕೋಯ ತಂಙಳ್ ಅವರ ನಿರ್ದೇಶನದಂತೆ ನಿರ್ಗಮನ ಅಧ್ಯಕ್ಷರಾದ ಅಬ್ದುಲ್ ಹಮೀದ್ ಟಿ.ಎಚ್.ಎಂ.ಎ. ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ರಶೀದ್ ವಿಟ್ಲ

ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಹನೀಫ್ ಕುದ್ದುಪದವು, ಕೋಶಾಧಿಕಾರಿಯಾಗಿ ಅನ್ವರ್ ಉಕ್ಕುಡ, ಸಂಚಾಲಕರಾಗಿ ಅಬೂಬಕರ್ ಟೆಲಿಫೋನ್, ಉಪಾಧ್ಯಕ್ಷರಾಗಿ ಅಬ್ಬಾಸ್ ಕಲ್ಲಂಗಳ, ಜೊತೆ ಕಾರ್ಯದರ್ಶಿಯಾಗಿ ಮುನೀರ್ ದರ್ಬೆ, ನಿರ್ದೇಶಕರಾಗಿ ಅಬ್ದುಲ್ ಹಮೀದ್ ಟಿ.ಎಚ್.ಎಂ.ಎ., ಸದಸ್ಯರಾಗಿ ಸಿದ್ದೀಕ್ ಆಲಂಗಾರು ಆಯ್ಕೆಯಾಗಿದ್ದಾರೆ.

ಹನೀಫ್ ಕುದ್ದುಪದವು
- Advertisement -

Related news

error: Content is protected !!