

ವಿಟ್ಲ: ಮುಡಿಪು ಸಮೀಪದ ಕೈರಂಗಳ ನಿವಾಸಿಯೊಬ್ಬ ತನ್ನ ಮಗನ ಹೆಂಡತಿಯ ಮೇಲೆ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಆರೋಪದಡಿಯಲ್ಲಿ ಈತ ಪೊಲೀಸರ ಅತಿಥಿಯಾಗಿದ್ದಾನೆ.

ಈತ ವಿಟ್ಲ ಸಮೀಪದ ಕಾಂತಿಲ ನಿವಾಸಿಯಾಗಿದ್ದು,ಇದೀಗ ಮುಡಿಪು ಸಮೀಪದ ಬಾಳೆಪುಣಿ ಗ್ರಾಮದ ಕೈರಂಗಳ ನಿವಾಸಿ ಪ್ರಾಣಿಗಿಂತಲೂ ಕೀಳಾಗಿ ವರ್ತಿಸಿದ್ದಾನೆ ಈ ಕಾಮುಕ. ಆರು ವರ್ಷಗಳ ಹಿಂದೆ ಈತನ ಪುತ್ರ ವಿಟ್ಲ ಪಡ್ನೂರು ಗ್ರಾಮದ ಯುವತಿಯನ್ನು ವಿವಾಹವಾಗಿದ್ದ.ಇಬ್ಬರು ಮಕ್ಕಳನ್ನು ಹೊಂದಿರುವ ದಂಪತಿ ತಂದೆ ಮತ್ತು ತಾಯಿ ಜೊತೆ ನೆಮ್ಮದಿಯ ಸಂಸಾರ ನಡೆಸುತ್ತಿದ್ದರು.ಸಂತ್ರಸ್ತೆಯ ಪತಿ ಮನೆಯಲ್ಲಿರದ ಸಮಯ ನೋಡಿ ಸೊಸೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪೀಡಿಸುತ್ತಿದ್ದಾನೆಂದು ಸಂತ್ರಸ್ತೆ ವಿವರಿಸಿದ್ದಾಳೆ.

ತನ್ನ ಹೀನಕೃತ್ಯ ಮುಗಿಸಿದ ಕಾಮುಕ ಮಾವ, ಈ ವಿಚಾರವನ್ನು ಬಾಯ್ಬಿಟ್ಟರೆ ಸಂತ್ರಸ್ತೆ ಹಾಗು ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.ಇದಾದ ಎರಡು ದಿನಗಳ ಬಳಿಕ ಬೆಳಗ್ಗೆ 11.30 ರ ಸುಮಾರಿಗೆ ಸಂತ್ರಸ್ತೆ ತೋಟಕ್ಕೆ ಹೋದ ಸಮಯ ನೋಡಿಕೊಂಡು ಅಲ್ಲಿಗೂ ವಕ್ಕರಿಸಿದ ಕಾಮುಕ ಮಾವ ಆಕೆಯನ್ನು ಎಳೆದು ಅತ್ಯಾಚಾರ ಮಾಡಿದ ಎನ್ನಲಾಗಿದೆ.

ಇದಾಗ ಬಳಿಕವೂ ಹಲವು ಸಲ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ. ಮಾವನಿಂದಲೇ ಸರಣಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಮಂಗಳೂರಿನ ಮಹಿಳಾ ಠಾಣೆಗೆ ನೀಡಿರುವ ದೂರಿಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

