Saturday, May 18, 2024
spot_imgspot_img
spot_imgspot_img

ವಿಟ್ಲ: ಮೂಡಂಬೈಲು ರವಿ ಶೆಟ್ಟಿ ನೇತೃತ್ವದ ನೇಸರ ಫೌಂಡೇಶನ್ ವತಿಯಿಂದ ಸಹಾಯಹಸ್ತ!

- Advertisement -G L Acharya panikkar
- Advertisement -

ಪುತ್ತೂರು: ಕಳೆದ ಸುಮಾರು ವರ್ಷಗಳಿಂದ ಅನೇಕ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಜನಾನುರಾಗಿಯಾಗಿರುವ, ಸಮಾಜ ಸೇವೆಗಾಗಿ ಅನೇಕ ಪ್ರಶಸ್ತಿಗಳನ್ನು ಪಡಕೊಂಡಿರುವ ಡಾ. ಮೂಡಂಬೈಲ್ ರವಿ ಶೆಟ್ಟಿ ಇವರ ಸಾರಥ್ಯದ ಮೂಡಂಬೈಲ್ ನೇಸರ ಫೌಂಡೇಶನ್ ಕರೋನದ ಮಹಾಮಾರಿಯ ಸಂದರ್ಭದಲ್ಲಿ ವಿನೂತನ ಕಾರ್ಯವನ್ನು ಕೈಗೊಂಡಿದೆ.

ಈ ಸಾಂಕ್ರಾಮಿಕ ರೋಗದ ಸಂದಿಗ್ದತೆಯಲ್ಲಿ ಈ ರೋಗ ನಿರ್ಮೂಲನೆ ಆಗಬೇಕೆಂಬ ಸಂಕಲ್ಪದ ಜೊತೆಗೆ ಸರ್ಕಾರದ ಸೂಚನೆಯನ್ನು ಪಾಲಿಸುತ್ತ ದಿವಸದ 24 ಗಂಟೆಯೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ನೈತಿಕ ಸ್ಥೈರ್ಯ ತುಂಬುವಂತದ್ದು ನಮ್ಮ ಕರ್ತವ್ಯ ಎಂಬಂತೆ ಮತ್ತು ರವಿ ಶೆಟ್ಟಿ ಯವರ ಧರ್ಮಪತ್ನಿ ಜ್ಯೋತಿ ಶೆಟ್ಟಿಯವರ ಹುಟ್ಟುಹಬ್ಬವನ್ನು ಆಶಾ ಕಾರ್ಯಕರ್ತೆಯರಿಗೆ ಗೌರವಿಸಿ, ಆರ್ಥಿಕವಾಗಿ ಸಹಕಾರ ನೀಡುವುದರ ಮೂಲಕ ಹಾಗೂ ತಮ್ಮನ ಮಗ ಶಾರ್ವಿಕ್ ನ ಹುಟ್ಟುಹಬ್ಬವನ್ನು ಅವಶ್ಯಕ ಮೆಡಿಕಲ್ ಪರಿಕರವನ್ನು ಆಶಾ ಕಾರ್ಯಕರ್ತೆಯರಿಗೆ ನೀಡುವುದರ ಮೂಲಕ ಸಾಕಾರಗೊಳಿಸಿದರು.

ಕಳೆದ ಬಾರಿ ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ಮಾನವೀಯ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿದ ರವಿ ಶೆಟ್ಟಿ ಯವರದ್ದು. ಕಳೆದ ಲಾಕ್ಡೌನ್ ಸಂದರ್ಭದಲ್ಲಿಯೂ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ರೂ 5 ಲಕ್ಷವನ್ನು ಶಾಸಕರ ಮೂಲಕ ನೀಡಿ ಕಷ್ಟದಲ್ಲಿದ್ದ ಸುಮಾರು 250 ಕುಟುಂಬಗಳಿಗೆ ದಿನಸಿ ಸಾಮಗ್ರಿ (ಕಿಟ್ ಗಳನ್ನು) ನೀಡಿ ಮಾನವೀಯ ಮೌಲ್ಯವನ್ನು ಈ ಕಾರ್ಯದ ಮೂಲಕ ಸಾಬೀತು ಪಡಿಸಿರುತ್ತಾರೆ.

ಇದೇ ರೀತಿ ತಮ್ಮ ಹುಟ್ಟೂರಾದ ಪುಣಚಾ/ಕೇಪು ಗ್ರಾಮದ ಆಶಾ ಕಾರ್ಯಕರ್ತೆಯರಿಗೂ ಹಾಗೂ ತರವಾಡು ಮನೆಯ ಗುರುಪುರದ ಆಶಾ ಕಾರ್ಯಕರ್ತೆಯರಿಗೆ ಇದೇ ರೀತಿ ಗೌರವಿಸಿ ಪ್ರೋತ್ಸಾಹ ಕೊಡುವ ಕೆಲಸವನ್ನು ಮಾಡುತ್ತಿರುವುದು ಗ್ರಾಮಸ್ಥರಾದ ನಮಗೆಲ್ಲರಿಗೂ ಹೆಮ್ಮೆ.

ಈ ಸಮಾಜಮುಖಿ ಕಾರ್ಯಕ್ರಮವನ್ನು ರವಿ ಶೆಟ್ಟಿ ಯವರ ಮಾತೃಶ್ರೀ ಸರೋಜಿನಿ ಶೆಟ್ಟಿ ಯವರು ಶಾಸಕ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ಚಾಲನೆ ನೀಡಿದ್ದಾರೆ.

ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್,ಹೈ ಕೋರ್ಟ್ ನಿವೃತ್ತ ನ್ಯಾಯಾಧೀಶ ಜಯರಾಮ ಚೌಟ , ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ, ಉದ್ಯಮಿ ಸುಧೀರ್ ಶೆಟ್ಟಿ ನೇಸರ ಕಂಪ,ತಾಲೂಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ,,ದಾಸಪ್ಪ ರೈ ಉಪ್ಪಳಿಗೆ, ಅಮೂಲ್ಯ, ವೇಣಿ , ಸುಮಲ ಉಪಸ್ಥಿತರಿದ್ದರು.

- Advertisement -

Related news

error: Content is protected !!