Thursday, July 30, 2026
spot_imgspot_img
spot_imgspot_img

ವಿಟ್ಲ ಠಾಣಾ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ವಿನೋದ್ ಕುಮಾರ್ ರೆಡ್ಡಿಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿನೋದ್ ಕುಮಾರ್ ರೆಡ್ಡಿ ಅವರಿಗೆ ಗೌರವಪೂರ್ಣ ಬೀಳ್ಕೊಡುಗೆ ಕಾರ್ಯಕ್ರಮ ವಿಟ್ಲಮೂಡ್ನೂರು ಗ್ರಾಮದ ಸಾಮಾಜಿಕ ಮುಂದಾಳು ದಯಾನಂದ ಶೆಟ್ಟಿ ಉಜಿರೆಮಾರು ಇವರ ಮನೆಯಲ್ಲಿ ನಡೆಯಿತು.

ಸುಮಾರು ಒಂದೂವರೆ ವರ್ಷಗಳ ಕಾಲ ವಿಟ್ಲ ಠಾಣೆಯಲ್ಲಿ ದಕ್ಷ ಅಧಿಕಾರಿಯಾಗಿ ಅಕ್ರಮ ಚಟುವಟಿಕೆ ಹಾಗೂ ಕ್ರೈಂಗಳಲ್ಲಿ ತೊಡಗಿದ್ದ ಸಮಾಜಘಾತುಕರಿಗೆ ಸಿಂಹ ಸ್ವಪ್ನವಾಗಿ ಅನೇಕ ಅಪರಾಧ ಕೃತ್ಯಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ವಿಟ್ಲದ ಜನರ ಮೆಚ್ಚುಗೆ ಪಡೆದು ಜನಸ್ನೇಹಿ ಪೊಲೀಸ್ ಸಿಂಗಂ ಎಂಬ ಬಿರುದು ಪಡೆದ ವಿನೋದ್ ಕುಮಾರ್ ರೆಡ್ಡಿ ಅವರಿಗೆ ಉಜಿರೆಮಾರು ಮನೆಯಲ್ಲಿ ಗೌರವಪೂರ್ಣ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು ವಿನೋದ್ ರೆಡ್ಡಿಯವರ ತಾಯಿ ಹಾಗೂ ಪತ್ನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮನೆಯ ಹಿರಿಯರಾದ ಶೇಷಪ್ಪ ಶೆಟ್ಟಿ ಉಜಿರೆಮಾರು, ಶಾಂಭವಿ ಶೆಟ್ಟಿ, ದಯಾನಂದ ಶೆಟ್ಟಿ, ಶ್ರೀ ವಿನೋದ್ ರೆಡ್ಡಿ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಅರುಣ್ ವಿಟ್ಲ, ರಾಮ್ ದಾಸ್ ಶೆಟ್ಟಿ, ದಿವಾಕರ ಶೆಟ್ಟಿ ಅಬೀರಿ, ಸುಶಾಂತ್ ಚಂದಳಿಕೆ, ಯತೀಶ್ ಹಡಿಲ್, ಪ್ರಶಾಂತ್ ಶೆಟ್ಟಿ ಪ್ರಭಾಕರ್ ಅಮೈ, ಪಂಚಾಯತ್ ಸದಸ್ಯರಾದ ಉಮೇಶ್ ಗೌಡ, ಪ್ರಶಾಂತ್ ಶೆಟ್ಟಿ ಬರೆ ಉಪಸ್ಥಿತರಿದ್ದರು.

- Advertisement -

Related news

error: Content is protected !!