Friday, July 31, 2026
spot_imgspot_img
spot_imgspot_img

ವಿಟ್ಲ: ಹಿಂದೂ ಜಾಗರಣ ವೇದಿಕೆ ಮುಡಿಪು ಕಾರ್ಯಕರ್ತರ ನೇತೃತ್ವದಲ್ಲಿ ನೆರವಿನ ಆಸರೆ ಯೋಜನೆಯಡಿ ನಿರ್ಮಿಸಲಾದ ಮನೆಯ ಕೀಲಿ ಕೈ ಹಸ್ತಾಂತರ; ನೆರವಿನ ಆಸರೆ ಯೋಜನೆಯ ಎರಡನೇ ಮನೆ ನಿರ್ಮಾಣಕ್ಕಾಗಿ ಭೂಮಿ ಪೂಜೆ

- Advertisement -
- Advertisement -

ವಿಟ್ಲ: ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಮುಡಿಪು ರಾಜರಾಮ್ ಭಟ್ ಕೈರಂಗಳ ಉಪಸ್ಥಿತಿಯಲ್ಲಿ ಹಿಂದು ಜಾಗರಣ ವೇದಿಕೆ ಮುಡಿಪು ಕಾರ್ಯಕರ್ತರ ನೇತೃತ್ವದಲ್ಲಿ ದಾನಿಗಳ ಸಹಕಾರದಲ್ಲಿ ಸ್ವಯಂಸೇವಕರ ನೆರವಿನಲ್ಲಿ ನೆರವಿನ ಆಸರೆ ಯೋಜನೆಯಡಿ ನಾರಯಣ ಪೂಜಾರಿ ಶೇಡಿಗುಂಡಿಯವರಿಗೆ ನಿರ್ಮಿಸಲಾದ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ.

ಮತ್ತು ನೆರವಿನ ಆಸರೆ ಯೋಜನೆಯಡಿ ಬಾಳೆಪುಣಿ ಹೂಹಾಕುವಕಲ್ಲು ಕುಕ್ಕುದಕಟ್ಟೆ ಶ್ರೀ ಶರಣಪ್ಪ ಮತ್ತು ಮನೆಯವರಿಗಾಗಿ ನೆರವಿನ ಯೋಜನೆಯ ಎರಡನೆಯ ಮನೆಯ ನಿರ್ಮಾಣಕ್ಕಾಗಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ರವರು ಭೂಮಿ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಸುದರ್ಶನ್ ಮೂಡಬಿದ್ರಿ ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಪಂಡಿತ್ ಹೌಸ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರೈ , ಜಾಗರಣ ವೇದಿಕೆ ವಿಭಾಗ ಸಂಪರ್ಕ ಪ್ರಮುಖ್ ರತ್ನಾಕರ ಶೆಟ್ಟಿ, ಕಲ್ಲಡ್ಕ ಜಿಲ್ಲಾ ಪ್ರಮುಖ್ ಶ್ರೀ ನರಸಿಂಹ ಶೆಟ್ಟಿ ಮಾಣಿ, ವಿಟ್ಲ ತಾಲೂಕು ಹೋರಾಟ ಪ್ರಮುಖ ವಿಜೇಶ್ ನಾಯ್ಕ್, ತಾಲೂಕು ಕಾರ್ಯದರ್ಶಿ ಪ್ರಶಾಂತ್ ಹಾಗೂ ಯುವ ಮೋರ್ಛಾ ಮಂಡಲ ಅಧ್ಯಕ್ಷ ಶ್ರೀ ಸಚಿನ್ ಮೋರೆ, ಹಿಂದು ಜಾಗರಣ ವೇದಿಕೆ ಮುಡಿಪು ವಲಯ ಅಧ್ಯಕ್ಷ ಪ್ರಶಾಂತ ಅಲಂಗ, ಶ್ರೀ ಬೆಳ್ಳೇರಿ ಕೇಶವ ಭಟ್ ಮುಂತಾದವರು ಭಾಗವಹಿಸಿದರು.

- Advertisement -

Related news

error: Content is protected !!