Thursday, June 18, 2026
spot_imgspot_img
spot_imgspot_img

ವಿಟ್ಲ: ಜ್ವರದಿಂದ ಬಳಲುತ್ತಿದ್ದ ಯುವಕ ಮೃತ್ಯು

- Advertisement -
- Advertisement -
vtv vitla

ವಿಟ್ಲ: ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಅಸ್ಪತ್ರೆಯಲ್ಲಿ ಸಾವಿಗೀಡಾದ ಘಟನೆ ನಡೆದಿದೆ. ಪುಣಚ ಬೈಲುಪಾದೆ ಲಿಯೋ ಡಿಸೋಜರವರ ಮಗ ರಿತೇಶ್ ಡಿಸೋಜ (31 ವ.)ಮೃತಪಟ್ಟವರು.

ಅವಿವಾಹಿತರಾಗಿದ್ದ ರಿತೇಶ್ ಡಿಸೋಜರವರಿಗೆ ಸೆ.30ರಂದು ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದರಿಂದ ಸ್ಥಳಿಯ ಅಸ್ಪತ್ರೆಯಲ್ಲಿ ಮದ್ದು ಮಾಡಿದ್ದರು, ಆದರೂ ಜ್ವರ ಕಡಿಮೆಯಾಗಿರಲಿಲ್ಲ. ಅ.4ರಂದು ಬೆಳಿಗ್ಗೆ 5 ಗಂಟೆಯ ಸಮಯಕ್ಕೆ ಅವರಿಗೆ ತೀವ್ರ ಜ್ವರ ಉಲ್ಬಣಗೊಂಡಿದ್ದರಿಂದ ಮಂಗಳೂರು ಕಂಕನಾಡಿ ಫಾದರ್‍ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ರಿತೇಶ್ ಡಿಸೋಜರವರು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಮೃತರ ತಂದೆ ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!