- Advertisement -
- Advertisement -




ವಿಟ್ಲ: ಕಾರು ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಪರ್ತಿಪ್ಪಾಡಿಯಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಕುಡ್ತಮುಗೇರಿನ ಪ್ರಗತಿ ಸ್ಟ್ರೀಟ್ಸ್ ಮಾಲಿಕ ಜಗನ್ನಾಥ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ.
ಜಗನ್ನಾಥ ಶೆಟ್ಟಿಗಾರ್‌ರವರು ಕುಡ್ತಮುಗೇರಿನಿಂದ ಪರ್ತಿಪ್ಪಾಡಿ ಕಡೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನದ ಟಯರ್ ಪಂಚರ್ ಆಗಿದ್ದರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಇದೇ ವೇಳೆ ಪುತ್ತೂರು ಭಾಗದಿಂದ ಸಾಲೆತ್ತೂರು ಕಡೆಗೆ ತೆರಳುತ್ತಿದ್ದ, ಪುತ್ತೂರು ಮೂಲದವರಿದ್ದ ಕಾರೊಂದು ಅವರಿಗೆ ಡಿಕ್ಕಿಯಾಗಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡ ಜಗನ್ನಾಥ ಶೆಟ್ಟಿಗಾರ್ ಅವರನ್ನು ಸ್ಥಳೀಯರು ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -








