Thursday, June 18, 2026
spot_imgspot_img
spot_imgspot_img

ಪ್ರವಾಸಿ ಕೂಟ ವಿಟ್ಲ (ರಿ): ನೂತನ ಕಚೇರಿ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

- Advertisement -
- Advertisement -

ವಿಟ್ಲ; ಪ್ರವಾಸಿ ಕೂಟ ವಿಟ್ಲ (ರಿ) ಇದರ ನೂತನ ಕಚೇರಿ ಉದ್ಘಾಟನಾ ಸಮಾರಂಭವು ಜೂನ್ 13 ಶನಿವಾರದಂದು ವಿಟ್ಲದ ಮೇಗಿನಪೇಟೆಯ ಎ.ಎಸ್. ಕಾಂಪ್ಲೆಕ್ಸ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು. ಸಂಘಟನೆಯ ಅಧ್ಯಕ್ಷರಾದ ಮುಹಮ್ಮದ್ ಮಸೂದ್ ವಿಟ್ಲ ಅವರು ನೂತನ ಕಚೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.ಕಾರ್ಯಕ್ರಮಕ್ಕೆ ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬರಾದ ಜನಾಬ್ ಆರಿಫ್ ಬಾಖವಿ ಅವರು ಪ್ರಾರ್ಥನೆ ನೆರವೇರಿಸಿ ಆಶೀರ್ವಚನ ನೀಡಿದರು.

ಬಳಿಕ ವಿಟ್ಲದ ಸ್ಪೈಸಿ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮೊಹಮ್ಮದ್ ಶಯಾನ್ ಶಾಫಿಯವರ ಕಿರಾಅತ್ ನೊಂದಿಗೆ ಆರಂಭಗೊಂಡಿತು. ಸಮಾರಂಭದ ಅಧ್ಯಕ್ಷತೆಯನ್ನು ಮುಹಮ್ಮದ್ ಮಸೂದ್ ವಿಟ್ಲ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘಟನೆಯ ಉದ್ದೇಶಗಳು, ಸಮಾಜಮುಖಿ ಕಾರ್ಯಚಟುವಟಿಕೆಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ಉಪಸ್ಥಿತರಿಗೆ ವಿವರಿಸಿದರು.

ಅತಿಥಿಗಳಾಗಿ ಅಬ್ದುಲ್ ರಹಿಮಾನ್ (ನಿವೃತ್ತ ಆರೋಗ್ಯ ನಿರೀಕ್ಷಕರು), ಪ್ರೊ. ಮುಸ್ತಫಾ ಖಲೀಲ್ (ಉಪನ್ಯಾಸಕರು, ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ), ಅಬೂಬಕರ್ ಅನಿಲಕಟ್ಟೆ (ಬರಹಗಾರರು), ವಿ.ಎಚ್. ಅಶ್ರಫ್ (ಉದ್ಯಮಿ), ಶಾಕಿರ್ ಅಳಕೆಮಜಲು ಹಾಗೂ ಉಬೈದುಲ್ಲಾ ವಿಟ್ಲ (ಅಧ್ಯಕ್ಷರು, ವಿ ಫೌಂಡೇಶನ್) ಉಪಸ್ಥಿತರಿದ್ದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಸ್ಥಾಪಕ ಅಧ್ಯಕ್ಷರಾದ ಸತ್ತಾರ್, ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶಾಫಿ ಒಕ್ಕೆತ್ತೂರು, ಪ್ರಧಾನ ಕಾರ್ಯದರ್ಶಿ ತವಾಜ್ ವಿಟ್ಲ, ಜೊತೆ ಕಾರ್ಯದರ್ಶಿ ಆಶಿಫ್ ಕಂಬಳಬೆಟ್ಟು, ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅನ್ಸಾರ್ ಅಲಿ, ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಶಾಫಿ ಕಂಬಳಬೆಟ್ಟು, ಕತಾರ್ ರಾಷ್ಟ್ರೀಯ ಸಮಿತಿಯ ಸದಸ್ಯ ಸಹದ್ ಕರೈ, ಮಾಧ್ಯಮ ವಕ್ತಾರ ಝಕರಿಯಾ ಸಾಲೆತ್ತೂರು ಹಾಗೂ ಸಹಾಯಕ ಮಾಧ್ಯಮ ವಕ್ತಾರ ನವಾಝ್ ಕಡಂಬು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರನ್ನು ಸಂಘದ ಪ್ರಧಾನ ಕಾರ್ಯದರ್ಶಿ ತವಾಜ್ ವಿಟ್ಲ ಸ್ವಾಗತಿಸಿದರು. ಸಹಾಯಕ ಮಾಧ್ಯಮ ವಕ್ತಾರ ನವಾಝ್ ಕಡಂಬು ಕಾರ್ಯಕ್ರಮವನ್ನು ನಿರೂಪಿಸಿದರು.

ಇದಲ್ಲದೆ ಸಂಘಟನೆಯ ಸದಸ್ಯರಾದ ಬಶೀರ್ ಕೊಳಂಬೆ, ಕಬೀರ್ ವಿಟ್ಲ ಸೇರಿದಂತೆ ಹಲವಾರು ಸದಸ್ಯರು, ಗಣ್ಯರು ಹಾಗೂ ಹಿರಿಯ ಪ್ರವಾಸಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಕಚೇರಿಗೆ ಶುಭ ಹಾರೈಸಿದರು. ನೂತನ ಕಚೇರಿಯ ಮೂಲಕ ಸಂಘಟನೆಯ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಸಂಕಲ್ಪ ವ್ಯಕ್ತಪಡಿಸಲಾಯಿತು.

ಸ್ಥಾಪಕ ಅಧ್ಯಕ್ಷರಾದ ಸತ್ತಾರ್ (ಯುಎಇ) ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

- Advertisement -

Related news

error: Content is protected !!