Sunday, July 19, 2026
spot_imgspot_img
spot_imgspot_img

ವಿಟ್ಲ: (ಆ. 24) ನುರಿತ ವೈದ್ಯರನ್ನೊಳಗೊಂಡ ’ಜನಪ್ರಿಯ ಹೆಲ್ತ್ ಸೆಂಟರ್‌ ಶುಭಾರಂಭ

- Advertisement -
- Advertisement -

ಉದ್ಘಾಟನಾ ಸಮಾರಂಭದ ಪ್ರಯುಕ್ತ ಅದೇ ದಿನ ಉಚಿತ ಆರೋಗ್ಯ ತಪಾಸಣಾ ಶಿಬಿರ

ವಿಟ್ಲ: ಜನಪ್ರಿಯ ಫೌಂಡೇಶನ್‌ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಾಸನ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಂಗಳೂರಿನಲ್ಲಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಇದೀಗ ಗ್ರಾಮೀಣ ಭಾಗದ ಜನತೆಗೆ ಇನ್ನಷ್ಟು ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಸುಸಜ್ಜಿತ ಹಾಗೂ ನುರಿತ ವೈದ್ಯರನ್ನೊಳಗೊಂಡ ’ಜನಪ್ರಿಯ ಹೆಲ್ತ್ ಸೆಂಟರ್‌’ ವಿಟ್ಲದಲ್ಲಿ ಆ. 24 ನೇ ಆದಿತ್ಯವಾರದಂದು ಜನಪ್ರಿಯ ಹೆಲ್ತ್ ಸೆಂಟರ್‍ ಶುಭಾರಂಭಗೊಳ್ಳಲಿದೆ.

ಜನಪ್ರಿಯ ಫೌಂಡೇಶನ್ ಇದರ ಅಧ್ಯಕ್ಷ ವಿ ಕೆ ಅಬ್ದುಲ್‌ ಬಶೀರ್‌ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಧಾರ್ಮಿಕ ಪಂಡಿತರಾದ ಅಲ್‌ಹಾಜಿ ಅಬ್ದುಲ್‌ ಅಝೀಝ್‌ ದಾರಿಮಿ ಚೊಕ್ಕಬೆಟ್ಟು, ಹಾಗೂ ವಿಟ್ಲ ಶೋಕ ಮಾತಾ ಇಗರ್ಜಿಯ ಧರ್ಮಗುರು ಫಾ. ಐವನ್‌ ಮೈಕಲ್‌ ರೋಡ್ರಿಗಸ್‌ ಸಂದೇಶ ನೀಡಲಿದ್ದಾರೆ.

ಜನಪ್ರಿಯ ಹೆಲ್ತ್‌ ಸೆಂಟರ್‌ನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್‍ ರೈ ಉದ್ಘಾಟಿಸಲಿದ್ದಾರೆ. ಸ್ಕ್ಯಾನಿಂಗ್‌ ಮತ್ತು ಎಕ್ಸ್‌ರೇ ಕೊಠಡಿಯನ್ನು ಮಾಜಿ ಸಚಿವ ಬಿ. ರಮನಾಥ್‌ ರೈ ಉದ್ಘಾಟಿಸಲಿದ್ದಾರೆ. ಔಷಧಾಲಯವನ್ನು ಬಂಟ್ವಾಳ ತಾಲೂಕು ವೈದ್ಯಾಧಿಕಾರಿ ಅಶೋಕ್‌ ರೈ ಉದ್ಘಾಟಿಸಲಿದ್ದಾರೆ. ಹೈಟೆಕ್ ಲ್ಯಾಬ್‌ನ್ನು ಕರ್ನಾಟಕ ಅಲೈಡ್ & ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ ಇಫ್ತಿಕಾರ್ ಅಲಿ ಫರೀದ್‌ ಉದ್ಘಾಟಿಸಲಿದ್ದಾರೆ.

ವಿಟ್ಲ ಪಟ್ಟಣ ಪಂಚಾಯತ್‌ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಎಂ.ಎಸ್ ಮೊಹಮ್ಮದ್, ವಿಟ್ಲ ಪುಷ್ಪಕ್‌ ಕ್ಲಿನಿಲ್‌ ಹಿರಿಯ ವೈದ್ಯ ಡಾ. ವಿ ಕೆ ಹೆಗ್ಡೆ, ಡಾ. ಗೀತಾ ಪ್ರಕಾಶ್ ಸುರಕ್ಷಾ ಆಸ್ಪತ್ರೆ ವಿಟ್ಲ, ಡಾ. ಅರವಿಂದ್ ಬೆನಕಾ ಕ್ಲಿನಿಕ್ ವಿಟ್ಲ, ಹಿರಿಯ ರಾಜಕಾರಣಿ ವಿಟ್ಲ ಮೊಹಮ್ಮದ್ ಕುಂಞಿ, ಎಮ್‌ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಸ್ಥಾಪಕ ರಶೀದ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್‌ ಉಪಾಧ್ಯಕ್ಷೆ ಸಂಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಪ್ರಕಾಶ್, ಕೃಷ್ಣಯ್ಯ ಬಲ್ಲಾಳ್ ವಿಟ್ಲ ಅರಮನೆ, ವಿಟ್ಲ ಪಟ್ಟಣ ಪಂಚಾಯತ್‌ ಮಾಜಿ ಅಧ್ಯಕ್ಷ ಅರುಣ್ ವಿಟ್ಲ, ವಿಟ್ಲ ಪದವಿ ಕಾಲೇಜು ಕಾರ್ಯಾಧ್ಯಕ್ಷ ವಿಕೆಎಂ ಅಶ್ರಫ್, ವಿಟ್ಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಾಬು ಕೊಪ್ಪಳ, ವಿಟ್ಲ ಜಮಾತ್ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಪೊನ್ನೊಟ್ಟು, ಡಿ ಗ್ರೂಪ್ ಅಧ್ಯಕ್ಷ ಶಕೀರ್ ಅಳಕೆಮಜಲು, ವಿಟ್ಲ ಕನ್ಸ್ಟ್ರಕ್ಷನ್ ಸುರೇಶ್‌ ಬನಾರಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ವಿಶೇಷವಾಗಿ ಉದ್ಘಾಟನಾ ಸಮಾರಂಭದ ಪ್ರಯುಕ್ತ ಅಂದೇ ವಿಟ್ಲ ಆಸುಪಾಸಿನ ಜನರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

- Advertisement -

Related news

error: Content is protected !!