- Advertisement -
- Advertisement -




ವಿಟ್ಲ: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರ ಗ್ರಾಮಾಂತರ ಮತ್ತು ನಗರ ಮಂಡಲ , ಪುಣಚ ಮತ್ತು ವಿಟ್ಲ ಮಹಾಶಕ್ತಿ ಕೇಂದ್ರದ ವತಿಯಿಂದ ಕೇಪು ಮಹಾಶಕ್ತಿ ಕೇಂದ್ರದ ಸಹಕಾರದೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ಧಿ ಕಾರ್ಯಕ್ರಮದ ಅಂಗವಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಮಹತ್ವಕಾಂಕ್ಷಿ ಯೋಜನೆ ಹಳ್ಳಿ ಹಳ್ಳಿಗಳ ರಸ್ತೆಗಳ ಅಭಿವೃದ್ಧಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಯೋಜನೆಯಡಿ ಅಭಿವೃದ್ಧಿಗೊಂಡ ಕೇಪು ವಾಜಪೇಯಿ ರಸ್ತೆಯಿಂದ ಕುದ್ದುಪದವುವರೆಗೆ ಬೃಹತ್ ಪಾದಯಾತ್ರೆ “ಅಟಲ್ ನಡಿಗೆ” ಕಾರ್ಯಕ್ರಮವು 28/2/2025 ನೇ ಶುಕ್ರವಾರ ಸಂಜೆ 3:30 ಕ್ಕೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಮುಖರು , ಹಿರಿಯ ಕಿರಿಯ ದೇವ ದುರ್ಲಭ ಕಾರ್ಯಕರ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
- Advertisement -