2024-25 ಸಾಲಿನಲ್ಲಿ ಬ್ಯಾಂಕ್ 864.42 ಕೋಟಿ ವ್ಯವಹಾರ ಮಾಡಿ 3.45 ಕೋಟಿ ಲಾಭಗಳಿಸಿದೆ:- ಅಧ್ಯಕ್ಷ ಹೆಚ್. ಜಗನ್ನಾಥ ಸಾಲ್ಯಾನ್

ವಿಟ್ಲ: ಗ್ರಾಮೀಣ ಬ್ಯಾಂಕ್ ನಿಯಮಿತ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಬ್ಯಾಂಕ್ ಅಧ್ಯಕ್ಷ ಹೆಚ್. ಜಗನ್ನಾಥ ಸಾಲ್ಯಾನ್‌ರವರ ಅಧ್ಯಕ್ಷತೆಯಲ್ಲಿ ವಿಟ್ಲ ಶಾಂತಿನಗರ ಅಕ್ಷಯ ಸಮುದಾಯ ಭವನದಲ್ಲಿ ನಡೆಯಿತು. ಬ್ಯಾಂಕಿನ ಹಿರಿಯ ಸದಸ್ಯ ನಾರಾಯಣ ಭಟ್ ಎಂ.ಜಿ, ಬ್ಯಾಂಕಿನ ಹಿರಿಯ ನಿವೃತ್ತ ಸಿಬ್ಬಂಧಿ ಶ್ರೀಮತಿ ಸುಂದರಿ ಕೆ, ಅನಂತ ಭಟ್ ನೀರ್ಕಜೆ, ಮತ್ತು ಹಿರಿಯ ಸದಸ್ಯರು ದೀಪ ಬೆಳಗಿಸಿ, ಉದ್ಘಾಟಿಸಿದರು. ಬಳಿಕ ಬ್ಯಾಂಕಿನ ಸ್ಥಾಪಕಾಧ್ಯಕ್ಷರು ದಿ. ಕೆ ವೆಂಕಪ್ಪಯ್ಯ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಸಭೆಯಲ್ಲಿ ಸಂಘದ ಅಧ್ಯಕ್ಷ ಹೆಚ್. ಜಗನ್ನಾಥ ಸಾಲ್ಯಾನ್ ಮಾತನಾಡಿ ’2024-25 ನೇ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರದಲ್ಲಿ ಸರ್ವತೋಮುಖ ಸಾಧನೆಗಾಗಿದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇವರ 2024-25 ನೇ ಸಾಲಿನ ವಾರ್ಚಿಕ ಮಹಾಸಭೆಯಲ್ಲಿ ಸತತ ನಾಲ್ಕನೇ ಬಾರಿಗೆ ಸಾಧನಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 2024-25 ರಲ್ಲಿ ಬ್ಯಾಂಕಿಗೆ 545 ’ಅ’ ತರಗತಿ ಸದಸ್ಯರು ಸೇರ್ಪಡೆಗೊಂಡಿದ್ದು, 8,515 ಸದಸ್ಯರಿದ್ದಾರೆ. ಬ್ಯಾಂಕಿನ ಒಟ್ಟು ಪಾಲು ಬಂಡವಾಳ ರೂ.2,82,57,470.00 ಆಗಿರುತ್ತದೆ. ಹಾಗೂ 2024-25 ಸಾಲಿನಲ್ಲಿ ಬ್ಯಾಂಕ್ 864.42 ಕೋಟಿ ವ್ಯವಹಾರ ಮಾಡಿ 3.45 ಕೋಟಿ ಲಾಭಗಳಿಸಿದೆ ಎಂದು ಘೋಷಣೆ ಮಾಡಿದರು.



2024-25 ನೇ ಸಾಲಿನ ಆಡಳಿತ ಮಂಡಳಿ ವರದಿ, ಲೆಕ್ಕ ಪರಿಶೋಧನಾ ವರದಿ, ನಿವ್ವಳ ಲಾಭದ ವಿಂಗಡನೆ, ಬಜೆಟ್ ಮೀರಿ ಖರ್ಚಾದ ವೆಚ್ಚಗಳ ಮಂಜೂರಾತಿ, ಹಾಗೂ 2025-26 ನೇ ಸಾಲಿಗೆ ಅಂದಾಜು ಮುಂಗಡ ಪತ್ರ, ಅಂಜೂರಾತಿಗೆ ಲೆಕ್ಕ ಪರಿಶೋಧಕರನ್ನು ನೇಮಿಸುವ ಕುರಿತ ವರದಿಯನ್ನು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೃಷ್ಣ ಮುರಳಿ ಶ್ಯಾಮ್ ಕೆ ಮಂಡಿಸಿದರು. ಹಿಂದಿನ ಮಹಾಸಭೆಯ ನಡವಳಿಗಳನ್ನು ನಿರ್ದೇಶಕ ವಿಶ್ವನಾಥ ಎಂ ವಾಚಿಸಿದರು.





ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮನೋರಂಜನ್ ಕೆ.ಆರ್, ಹಾಗೂ ನಿರ್ದೇಶಕರುಗಳಾದ ಜಯಂತಿ ಎಚ್ ರಾವ್, ಶುಭಲಕ್ಷ್ಮೀ, ದಯಾನಂದ ಆಳ್ವ ಕೆ, ಪೂವಪ್ಪ ಎಸ್, ದಿವಾಕರ ವಿ, ಕೇಶವ ಎ, ಗೋವರ್ಧನ ಕುಮಾರ್ ಐ, ಭಾಸ್ಕರ ಶೆಟ್ಟಿ, ರಾಮ್‌ದಾಸ್ ಶೆಣೈ ವಿ, ಮೋಹನ್ ಕೆ ಎಸ್, ವಿಶ್ವನಾಥ ಎಂ, ತಿರುಮಲೇಶ್ವರ ಭಟ್ ಪಿ, ಸತೀಶ್ ಪಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕ್ ಅಧ್ಯಕ್ಷ ಹೆಚ್. ಜಗನ್ನಾಥ ಸಾಲ್ಯಾನ್ ಸ್ವಾಗತಿಸಿ, ಉಪಾಧ್ಯಕ್ಷ ಮನೋರಂಜನ್ ಕೆ.ಆರ್ ಧನ್ಯವಾದವಿತ್ತರು. ಕಲ್ಲಡ್ಕ ಶಾಖೆಯ ಶಾಖಾಧಿಕಾರಿ ಶ್ರೀನಿಧಿ ವಿ ಕುಡ್ವ ಕೆ ಪ್ರಾರ್ಥಿಸಿದರು. ಮಹೇಶ್ ಕುಮಾರ್ ಎಸ್ ಕಾರ್ಯಕ್ರಮ ನಿರೂಪಿಸಿದರು.








