- Advertisement -
- Advertisement -





ವಿಟ್ಲ: ಗೋವರ್ದನ್ ಕುಮಾರ್ ಐ ಇಡಿಯಾಳ ಇವರ ಮಾಲಕತ್ವದಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಇದರ ಗ್ರಾಹಕರ ಸೇವಾ ಕೇಂದ್ರ ಹಿರಾ ಟವರ್‍ಸ್‌ನಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೋಟ್ಟು ಉಪಸ್ಥಿತರಿದ್ದರು.
ಈ ಸಂರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲ, ಮೈತ್ರಿ ಗುರುಕುಲದ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು, ವಿಟ್ಲ ಗ್ರಾಮೀಣ ಬ್ಯಾಂಕ್ ನಿರ್ದೇಶಕ ರಾಮ್‌ದಾಸ್ ಶೆಣೈ, ಕಟ್ಟಡದ ಮಾಲಕ ಶಿಫರ್ಡ್ ವೇಗಸ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಪರ್ಯಾವರಣ ಪ್ರಮುಖ ಜತ್ತಪ್ಪ ವಿಟ್ಲ, ಬಂಟ್ವಾಳ ಶಾಖೆಯ ಹಿರಿಯ ಶಾಖಾಧಿಕಾರಿ ಗುರುದತ್ತ್ ನಾಯಕ್, ಉಪಶಾಖಾಧಿಕಾರಿ ಮುತ್ತಯ್ಯ ಮರಾಠಿ ಉಪಸ್ಥಿತರಿದ್ದರು.

- Advertisement -








