


ವಿಟ್ಲ: ಬಹುಗ್ರಾಮ ಕುಡಿಯುವ ನೀರು ವಿತರಣೆ ಸಂಬಂಧಿಸಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರು ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಯೋಜನೆಯ ಪ್ರಸ್ತುತ ಪ್ರಗತಿ, ನೀರು ಸರಬರಾಜಿನ ಸಮಸ್ಯೆಗಳು ಹಾಗೂ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸುವ ಕ್ರಮಗಳ ಕುರಿತು ಚರ್ಚೆ ನಡೆಯಿತು.
ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ100 ಕೋಟಿ ರೂ ಮಂಜೂರಾಗಿದೆ.ಗ್ರಾಮಾಂತರ ಕುಡಿಯುವ ನೀರಿನ ಯೋಜನೆಗೆ ಸೇರಿಸಿ ಟೆಂಡರ್ ಮಾಡಿ 1006ಕೋಟಿ ರೂ ಟೆಂಡರ್ ಆಗಿದೆ ಆ ಮುಖಾಂತರ ಅದರ ಕಾಮಗಾರಿ ನಡೆಯುತ್ತಿದೆ. ಈ ಎಲ್ಲಾ ಯೋಜನೆಗಳು ಸುಮಾರು 30ವರ್ಷಗಳ ಯೊಜನೆಗಳಾಗಿರುತ್ತದೆ, ಈಗ ಸರ್ವೇ ಮಾಡಿದ ಪ್ರಕಾರ ವಿಟ್ಲ ಪಟ್ಟಣ ಪಂಚಾಯತ್ ಗೆ 4.82mld ಅಂದರೆ 4ಲಕ್ಷ 82 ಸಾವಿರ ltr ನ ಅವಶ್ಯಕತೆ ಇದೆ ಬಹುಗ್ರಾಮ ಕುಡಿಯುವ ನೀರಿನಿಂದ 34ಲಕ್ಷ ltr ಸಪ್ಲೈ ಮಾಡುತ್ತದೆ ಸುಮಾರು 15ಲಕ್ಷ ನೀರಿನ shortage ಆಗ್ತಾದೆ, ನೀರಿನ ಹಂಚಿಕೆ ಮಾಡಲು ಯಾವುದೇ ವ್ಯವಸ್ಥಿತ ರೀತಿಯ ಯೋಜನೆಗಳನ್ನು DPR ಲ್ಲಿ ಸೇರಿಸಿಲ್ಲ 3ಲಕ್ಷ 10 ಸಾವಿರ ltr ಟ್ಯಾಂಕ್ ಮಾತ್ರ ಯೋಜನೆಗಳಿವೆ . ವಿಟ್ಲ ಪಟ್ಟಣ ಪಂಚಾಯತ್ ಗೆ ಕುಡಿಯುವ ನೀರಿನ ಯೋಜನೆಗಾಗಿ 5 ಲಕ್ಷದ ಇನ್ನೋಂದು ಟ್ಯಾಂಕ್ ಇದೆ ಮತ್ತು 15ಲಕ್ಷದ ನೀರಿನ ಟ್ಯಾಂಕ್ ಮಾಡುವ ಯೋಜನೆ ಮಾಡಿಕೊಂಡಿದ್ದೆವೆ ಅದರ ಜೊತೆಗೆ ಎಲ್ಲಾ ಪೈಪ್ ಲೈನ್ ಬದಲಾವಣೆ ಮಾಡಲು ಸುಮಾರು 75ಕೋಟಿ ರೂಪಾಯಿಯ DPRನ್ನು ತಯಾರು ಮಾಡಿ ಸರ್ಕಾರದ ಮುಂದೆ ಅದನ್ನು ಇಡುವಂತಹ ಕೆಲಸವನ್ನು ಮಾಡುತ್ತೆವೆ ಮುಂದಿನ 6 ತಿಂಗಳಲ್ಲಿ ಕುಡಿಯುವ ನೀರು ಬರುವ ವ್ಯವಸ್ಥೆ ಆಗ್ತಾದೆ ಆದರೆ ನೀರಿನ ಹಂಚಿಕೆಗೆ ತೊಂದರೆ ಆಗುತ್ತದೆ. ಈ ಕಾರಣದಿಂದ ಅಧಿಕಾರಿಗಳು, ಪಟ್ಟಣ ಪಂಚಾಯತ್ ನ ಸದಸ್ಯರನ್ನು ಕರೆದು ಚರ್ಚೆಯನ್ನು ನಡೆಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು
ಸಭೆಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು, ಉಪಾಧ್ಯಕ್ಷೆ ಸಂಗೀತಾ ಜಗದೀಶ ಪಾಣೆಮಜಲು ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿ, ಮುಖ್ಯಾಧಿಕಾರಿ ಕರುಣಾಕರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ಎಇಇ ಶೋಭಾಲಕ್ಷ್ಮಿ, ಗ್ರಾಮ ಕುಡಿಯುವ ನೀರಿನ ಇಂಜಿನಿಯರ್ ಜಯಕುಮಾರ್ ಹಾಗೂ ಪಟ್ಟಣ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.








