Saturday, July 25, 2026
spot_imgspot_img
spot_imgspot_img

ವಿಟ್ಲ: (ನ.21-27) ಶ್ರೀಮತ್‌ ಅನಂತೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹಾರಥೋತ್ಸವ

- Advertisement -
- Advertisement -

ವಿಟ್ಲ: ಶ್ರೀಮತ್‌ ಅನಂತೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಶ್ರೀ ದೇವಳದ ಷಷ್ಠಿ ಮಹಾರಥೋತ್ಸವವು ದಿನಾಂಕ ನವೆಂಬರ್‌ 21-11-2025ನೇ ಶುಕ್ರವಾರದಿಂದ ದಿನಾಂಕ 27-11-2025ನೇ ಗುರುವಾರದವರೆಗೆ ನಡೆಯಲಿದೆ.

ದಿನಾಂಕ: 21-11-2025ನೇ ಶುಕ್ರವಾರ ಪ್ರಾತಃಕಾಲ 6.00ಕ್ಕೆ ಆದಿಸ್ಥಳ ವನಭೋಜನದಿಂದ ಮೃತ್ತಿಕೆ ತರುವುದು, ಬೆಳಿಗ್ಗೆ 9.00ಕ್ಕೆ ಕೋಶಗಾರ ಪೂಜೆ ನಡೆಯಲಿದೆ.

ದಿನಾಂಕ: 22-11-2025ನೇ ಶನಿವಾರ ಬೆಳಿಗ್ಗೆ 9.00ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆದು ಮಧ್ಯಾಹ್ನ 12.00ಕ್ಕೆ ಧ್ವಜಾರೋಹಣ, ಮಹಾಪೂಜೆ ಬಳಿಕ ರಾತ್ರಿ ಗಂಟೆ 8.00ಕ್ಕೆ ಮಂಗಳಾರತಿ ಮತ್ತು ಉತ್ಸವ ನಡೆಯಲಿದೆ.

ದಿನಾಂಕ: 23-11-2025ನೇ ಭಾನುವಾರ ಬೆಳಿಗ್ಗೆ 8.30ಕ್ಕೆ ಮಹಾಪೂಜೆ, ಮಂಗಳಾರತಿ ನಡೆದು 9.00ಕ್ಕೆ ಶ್ರೀಮತ್ ಪರಿಜ್ಞಾನಾಶ್ರಮ ಪಾದುಕಾ ಸನ್ನಿಧಿ ಪೂಜೆ ಬಳಿಕ ರಾತ್ರಿ 8.00ಕ್ಕೆ ಮಂಗಳಾರತಿ ಮತ್ತು ಉತ್ಸವ ನಡೆಯಲಿದೆ.

ದಿನಾಂಕ: 24-11-2025ನೇ ಸೋಮವಾರ ಬೆಳಿಗ್ಗೆ 9.30ಕ್ಕೆ ಮಹಾಪೂಜೆ, ಮಂಗಳಾರತಿ ಬಳಿಕ ರಾತ್ರಿ 8.00ಕ್ಕೆ ಮಂಗಳಾರತಿ ಮತ್ತು ಉತ್ಸವ ನಡೆಯಲಿದೆ.

ದಿನಾಂಕ: 25-11-2025ನೇ ಮಂಗಳವಾರ ಬೆಳಿಗ್ಗೆ 8.30ಕ್ಕೆ ಮಹಾಪೂಜೆ, ಮಂಗಳಾರತಿ ನಡೆದು ರಾತ್ರಿ 9.00ಕ್ಕೆ ಮೃಗಬೇಟೆ – ಉತ್ಸವ ನಡೆಯಲಿದೆ.

ದಿನಾಂಕ: 26-11-2025 ಬುಧವಾರ ಬೆಳಿಗ್ಗೆ 9.30ಕ್ಕೆ ಮಹಾಪೂಜೆ, ಮಂಗಳಾರತಿ ನಡೆದು ಮಧ್ಯಾಹ್ನ 12.00ಕ್ಕೆ ಮಹಾ ರಥೋತ್ಸವ ಬಳಿಮ ರಾತ್ರಿ 9.00ಕ್ಕೆ ಬಂಡಿ ಉತ್ಸವ, ರಾತ್ರಿ 10.00ಕ್ಕೆ ಮಹಾಪೂಜೆ, ಮಂಗಳಾರತಿ ನಡೆಯಲಿದೆ.

ದಿನಾಂಕ: 27-11-2025ನೇ ಗುರುವಾರ ಬೆಳಿಗ್ಗೆ 8.00ಕ್ಕೆ ಅವಭೃತೋತ್ಸವ ನಡೆದು ಮಧ್ಯಾಹ್ನ 12.00ಕ್ಕೆ ಧ್ವಜಾವರೋಹಣ, ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಮಂಗಳಾರತಿ, ಅಂಕುರ ಪ್ರಸಾದ ವಿತರಣೆ ಬಳಿಕ ಸಂಜೆ 5.30ಕ್ಕೆ ನಾಗಕಟ್ಟೆಯಲ್ಲಿ ನಾಗ ತಂಬಿಲ ನಡೆಯಲಿದೆ.

ದಿನಾಂಕ: 28-12-2025ನೇ ಶುಕ್ರವಾರ ಕಿರುಷಷ್ಠಿ ನಡೆಯಲಿದೆ.

- Advertisement -

Related news

error: Content is protected !!