Tuesday, June 23, 2026
spot_imgspot_img
spot_imgspot_img

ವಿಟ್ಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಸಾರ್ವಜನಿಕ ಭಾರತ ಮಾತಾ ಪೂಜನ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಸಾರ್ವಜನಿಕ ಭಾರತ ಮಾತಾ ಪೂಜನ ಕಾರ್ಯಕ್ರಮವು ವಿಟ್ಲ ನಗರದ 8 ನೇ ಬೂತ್ / 11ನೇ ವಾರ್ಡ್ ನ ಜೇಸೀ ಶಾಲೆಯಲ್ಲಿ ನಡೆಯಿತು.

ವಾರ್ಡಿನ ಹಿರಿಯ ನಾಗರಿಕ ನಿತ್ಯಾನಂದ ಶೆಣೈ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಸ್ವಯಂಸೇವಕ ಕರಿಯಪ್ಪ ಕಟ್ಟೆ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.

ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಂಚಾಲಕರು ಹಾಗೂ ಸಂಘದ ವಿಭಾಗ ಸಾಮರಸ್ಯ ಸಂಯೊಜಕರಾದ ರವೀಂದ್ರ ಅವರು ಬೌದ್ಧಿಕ್ ಅನ್ನು ನಡೆಸಿಕೊಟ್ಟರು. ತಮ್ಮ ಭಾಷಣದಲ್ಲಿ ಅವರು ಭಾರತದ ಇತಿಹಾಸ, ಹಿಂದು ಸಂಘಟನೆಯ ಅಗತ್ಯತೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆ, ಪಂಚ ಪರಿವರ್ತನೆ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದರು.

ಶ್ಯಾಮಸುಂದರ ನೆತ್ರಕೆರೆ ಅವರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಉಜ್ವಲ್ ಕಟ್ಟೆ, ಗುರುಪ್ರಸಾದ್ ಹಾಗೂ ದೀಪಕ್ ಅವರು ಅತಿಥಿಗಳಿಗೆ ಹೂವನ್ನು ನೀಡಿ ಗೌರವಿಸಿದರು. ವಾರ್ಡಿನ ಕೌನ್ಸಿಲರ್ ಅರುಣ್ ವಿಟ್ಲ ಅವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ವೈಷ್ಣವಿ ಹಾಗೂ ಮೂಕಾಂಬಿಕಾ ಟೀಚರ್ ರು ವೈಯಕ್ತಿಕ ಗೀತೆಯನ್ನು ಹಾಡಿದರು. ರವಿ ಕಟ್ಟೆ ಅವರು ಧನ್ಯವಾದ ಸಮರ್ಪಣೆ ಮಾಡಿದರು. ಚಿತ್ರ ಶ್ರೀ ಎನ್ ಹಾಗೂ ಶ್ರೀವರ್ಣ ಎನ್ ವಂದೇ ಮಾತರಂ ಗೀತೆಯನ್ನು ಹಾಡಿದರು.

ಸೇರಿದ್ದ ಹಿಂದೂ ಬಾಂಧವರು ಹಾಗೂ ಮಾತೆಯರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮಾತೆಯರು ತಮ್ಮ ತಮ್ಮ ಮನೆಗಳಿಂದ ತಯಾರಿಸಿ ತಂದಿದ್ದ ವಿವಿಧ ಖಾದ್ಯಗಳು ಹಾಗೂ ಸಿಹಿಯನ್ನು ಎಲ್ಲರೂ ಸ್ವೀಕರಿಸಿ ಸಹಭೊಜನ ಗೈವುದರೊಂದಿಗೆ ಭಾರತಮಾತಾ ಪೂಜನ ಕಾರ್ಯಕ್ರಮವು ಸಂಪನ್ನಗೊಂಡಿತು.

- Advertisement -

Related news

error: Content is protected !!