Sunday, July 19, 2026
spot_imgspot_img
spot_imgspot_img

ವಿಟ್ಲ: ಕಲ್ಲಕಟ್ಟ ಶ್ರೀ ಮಂಜುನಾಥ ಸಂಕೀರ್ಣದಲ್ಲಿ ರಕ್ಷಾ ಕ್ಲಿನಿಕ್‌ನ ಎರಡನೇ ಶಾಖೆ ಶುಭಾರಂಭ

- Advertisement -
- Advertisement -

ಆರೋಗ್ಯಕರ ಸಮಾಜ ನಿರ್ಮಿಸಲು ಕ್ಲಿನಿಕ್ ಸಹಕಾರಿಯಾಗಿದೆ- ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ

ವಿಟ್ಲ: ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಕ್ಲಿನಿಕ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವೇಗವಾಗಿ ಬೆಳೆಯುತ್ತಿರುವ ವಿಟ್ಲ ಪಟ್ಟಣಕ್ಕೆ ಅತ್ಯಗತ್ಯವಾದ ಮತ್ತೊಂದು ಆರೋಗ್ಯ ಕೇಂದ್ರ ಇದೀಗ ಆರಂಭಗೊಂಡಿದೆ. ಇಂದಿನ ಬದಲಾಗುತ್ತಿರುವ ಜೀವನಶೈಲಿಯಿಂದ ಉಂಟಾಗುವ ರೋಗಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ರಕ್ಷಾ ಕ್ಲಿನಿಕ್‌ನಲ್ಲಿ ಲಭ್ಯವಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಅವರು ಕಲ್ಲಕಟ್ಟ ಶ್ರೀ ಮಂಜುನಾಥ ಸಂಕೀರ್ಣದಲ್ಲಿ ರಕ್ಷಾ ಕ್ಲಿನಿಕ್‌ನ ಎರಡನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಬಳಿಕ ಮಾತನಾಡಿದ ಸ್ವಾಮೀಜಿ ಯವರು ಇಂದಿನ ಜೀವನಶೈಲಿಯ ರೋಗವನ್ನು ಕಂಡು ಹಿಡಿಯುವ ವ್ಯವಸ್ಥೆ ಇಲ್ಲಿದೆ ಎಂದು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಸ್ಥಾಯೀ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಟ್ಟಡದ ಮಾಲಕಿ ಭವಾನಿ ರೈ, ಹಿರಿಯ ವೈದ್ಯ ಡಾ. ರಾಮಭಟ್, ಸುರಕ್ಷಾ ಕ್ಲಿನಿಕ್ ನ ಗೀತಾಪ್ರಕಾಶ, ಬೆನಕಾ ಕ್ಲಿನಿಕ್ ನ ಡಾ. ಅರವಿಂದ್, ಉದ್ಯಮಿಗಳಾದ ಬಾಲಕೃಷ್ಣ, ಸುಧೀರ್, ನಟೇಶ್ ವಿಟ್ಲ, ಕೃಷ್ಣಪ್ರಸಾದ್ ಪುತ್ತೂರು, ದೀಪಾ ಕ್ಲೀನಿಕ್ ವೈದ್ಯ ಉದಯಶಂಕರ ಟಿ., ದೀಪಾ ಭಟ್, ರಕ್ಷಾ ಕ್ಲಿನಿಕ್ ಮಾಲಕ ಚಿನ್ಮಯ ಕೃಷ್ಣ, ಸ್ಮಿತಾ ಚಿನ್ಮಯ, ಮಾಲಕರ ತಂದೆ ಗೋಪಾಲಕೃಷ್ಣ ಭಟ್ ಆಲಂಗಾರು, ತಾಯಿ ಚಂದ್ರಮತಿ, ಕ್ಲಿನಿಕ್ ವೈದ್ಯ ಡಾ. ಜಾರ್ಜ್ ಷಾಜಿ, ಸಿಬ್ಬಂದಿಗಳಾದ ಮೋನಿಷಾ, ಭಾಗ್ಯವತಿ, ಜಲಜಾಕ್ಷಿ, ಪುಣ್ಯಶ್ರೀ, ಶರಣ್ಯ, ಪ್ರಣಮ್ಯ, ಪುಷ್ಪಾವತಿ, ವಿದ್ಯಾಶ್ರೀ, ಈಶ್ವಮಂಗಲ ರಕ್ಷಾ ಕ್ಲಿನಿಕ್ ನ ವೈದ್ಯ ಡಾ. ಅಜಿತ್ ಪಿ. ಬಿ. ಮತ್ತಿತರರು ಉಪಸ್ಥಿತರಿರುವರು.

ಕ್ಲಿನಿಕ್‌ನಲ್ಲಿ 24 ಗಂಟೆ ಸೇವೆಯನ್ನು ನೀಡುವ ತಜ್ಞರನ್ನು ನೇಮಿಸಲಾಗಿದೆ. ಹಾಸಿಗೆ ಸೌಲಭವನ್ನು ಹೊಂದಿದ್ದು, ಡ್ರಿಪ್ಸ್ ವ್ಯವಸ್ಥೆ ಮಾಡಲಾಗಿದೆ. ಇಸಿಜಿ, ಎಕ್ಸ ರೇ, ಆಕ್ಸಿಜನ್, ನೆಬಲೈಸೇಶನ್ ಸೌಲಭ್ಯಗಳನ್ನು ನೀಡಲಾಗಿದೆ. ರಕ್ತಪರೀಕ್ಷೆಯಲ್ಲಿ ಬಯೋಕೆಮಿಸ್ಟ್ರಿ ಪರೀಕ್ಷೆ, ಲಿವರ್ ಫಂಕ್ಷನ್ ಪರೀಕ್ಷೆ, ಥೈರಾಯ್ಡ್ ಪರೀಕ್ಷೆಯನ್ನು ಒಳಗೊಂಡಿದೆ.

- Advertisement -

Related news

error: Content is protected !!