- Advertisement -
- Advertisement -



ವಿಟ್ಲ: ಸೀಗೆಬಲ್ಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಖಾಸಗಿ ಜಮೀನಿನ ಗುಡ್ಡವೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಬೆಂಕಿ ಹತ್ತಿಕೊಂಡ ಪರಿಣಾಮ ಸುಮಾರು ಮರಗಳು ಹೊತ್ತಿ ಉರಿದಿದ್ದು, ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಡಿ ಗ್ರೂಪ್ ನೌಕರ ಪ್ರದೀಪ್ ಎಂಬವರು ಅಗ್ನಿ ಶಾಮಕ ದಳಕ್ಕೆ ತಕ್ಷಣ ಮಾಹಿತಿ ನೀಡಿದ್ದಾರೆ.


ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ, ಯಾವುದೇ ಪ್ರಾಣಾಪಾಯ ಅವಘಡಗಳು ಸಂಭವಿಸಿಲ್ಲ. ಬೆಂಕಿ ಕಾಣಿಸಿಕೊಂಡ ಗುಡ್ಡದ ಪಕ್ಕದಲ್ಲಿ ಕೆಲವು ಮನೆಗಳಿದ್ದು, ಪ್ರದೀಪ್ ಕುಮಾರ್ ಅವರು ತಕ್ಷಣ ಸ್ಪಂದಿಸಿದ ಕಾರ್ಯವೈಖರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Advertisement -








