



ವಿಟ್ಲ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಮಂಗಳೂರು ಗ್ರಾಮಾಂತರ ಜಿಲ್ಲೆ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನದ ಪ್ರಯುಕ್ತ ಹಿಂದೂ ಯುವ ಸಮಾವೇಶ ನಡೆಯಿತು.ಜೈನ ಬಸದಿ ಯಿಂದ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ಸಾಗಿ ಬಂತು. ಬಳಿಕ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಮಾವೇಶ ಸಭೆ ನಡೆಯಿತು.

ಸಭೆಯಲ್ಲಿ ಜಿಲ್ಲಾ ಸಂಯೋಜಕರು ನರಸಿಂಹ ಮಾಣಿ ಪ್ರಸ್ತಾವನೆ ಗೈದರು. ಕೇಶವ ಬಂಗೇರ, ವಿಭಾಗ ಪ್ರಮುಖ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇವರು ದಿಕ್ಸೂಚಿ ಭಾಷಣ ಮಾಡಿದರು.

ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಪುಷ್ಪರಾಜ್ ಕಮ್ಮಾಜೆ, ಪ್ರಾಂತ ಕಾರ್ಯಕಾರಿಣಿ ಸದಸ್ಯರು ಪ್ರಶಾಂತ್ ಕೆಂಪುಗುಡ್ಡೆ, ತಾಲ್ಲೂಕು ಸಂಯೋಜಕರು ಹರ್ಷರಾಜ್ ವಿಟ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎ ಬಿ ವಿ ಪಿ ಪ್ರಮುಖ್ ಚೇತನ್ ವಿಟ್ಲ ಸ್ವಾಗತಿಸಿ, ನಾಗೇಶ್ ಭಂಡಾರಿ ಅನಂತಾಡಿ ಧನ್ಯವಾದವಿತ್ತರು. ಶ್ರೀಮತಿ ಗುರುಪ್ರಿಯಾ ಶಿವಾನಂದ ಕಾಮತ್ ವೈಯಕ್ತಿಕ ಗೀತೆ ಹಾಗೂ ಕುl ದಿವ್ಯನಿಧಿ ರೈ ಎರುಂಬು ವಂದೇ ಮಾತರಂ ಹಾಡಿದರು. ಗಣೇಶ್ ಶೆಟ್ಟಿ ಬಾರೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು.ದಯಾನಂದ ಶೆಟ್ಟಿ ಉಜಿರೆಮಾರ್ ಅಧ್ಯಕ್ಷರು ಬಿಜೆಪಿ ಮಂಡಲ ಪುತ್ತೂರು, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರು ಕರುಣಾಕರ ನಾಯ್ತೊಟ್ಟು ಸೇರಿದಂತೆ ಹಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
