Thursday, July 23, 2026
spot_imgspot_img
spot_imgspot_img

ವಿಟ್ಲ: (ಅ.29) ಮುಸ್ಲಿಂ ಜಮಾಅತ್ ವತಿಯಿಂದ ಸಿಂಪೋಸಿಯಂ ಜಿಲ್ಲಾ ಕಾರ್ಯಾಗಾರ

- Advertisement -
- Advertisement -

ವಿಟ್ಲ: ಅಹ್ಲ್ ಸುನ್ನ ವಲ್ ಜಮಾಅತ್ ತತ್ವಾದರ್ಶದಲ್ಲಿ ಮುನ್ನೆಡೆಯುತ್ತಿರುವ ಹಿರಿಯ ಸಂಘಟನೆಯಾದ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವತಿಯಿಂದ ನಾಳೆ (2025 ಅಕ್ಟೋಬರ್ 29) ವಿಟ್ಲ ಪೇಟೆಯ ಹೃದಯ ಭಾಗದಲ್ಲಿರುವ ಸುಸಜ್ಜಿತ ಬ್ರೈಟ್ ಅಡಿಟೋರಿಯಂನಲ್ಲಿ ಸಿಂಪೋಸಿಯಂ ಜಿಲ್ಲಾ ಕಾರ್ಯಾಗಾರ ನಾಯಕರ ಸಮಾವೇಶ ನಡೆಯಲಿದೆ.

ಬೆಳಗ್ಗೆ 9:30 ಕ್ಕೆ ಕಾರ್ಯಕ್ರಮ ಆರಂಭಗೊಂಡು ಮಧ್ಯಾಹ್ನ 1:00 ಕ್ಕೆ ಕೊನೆಗೊಳ್ಳಲಿದೆ. ಕಾರ್ಯಕ್ರಮವು ಎರಡು ಸೆಷನ್ ಗಳಲ್ಲಿ ನಡೆಯಲಿದ್ದು, ಮೊದಲ ಸೆಷನ್ ನಲ್ಲಿ ಸಾಂಘಿಕ ಸಂಕಿರಣ ಹಾಗೂ ಎರಡನೇ ಸೆಷನ್ ನಲ್ಲಿ ಆತ್ಮೀಯ ಸಂಕಿರಣ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಅಸ್ಸೆಯ್ಯಿದ್ ಅಹಮದ್ ಜಲಾಲುದ್ದೀನ್ ತಂಙಳ್ ಮಳ್‌ಹರ್ ರವರು ಮುಖ್ಯ ತರಗತಿ ಮಂಡಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷ ಜಿ ಎಂ ಎಂ ಕಾಮಿಲ್ ಸಖಾಫಿ ಉಸ್ತಾದರು ವಹಿಸಲಿದ್ದು, ಕಾರ್ಯಕ್ರಮದಲ್ಲಿ ಸಯ್ಯಿದ್ ಎಸ್ ಎಂ ತಂಙಳ್ ಉಜಿರೆ, ಸಯ್ಯಿದ್ ಹಬೀಬುಲ್ಲಾ ತಂಙಳ್ ಪೆರುವಾಯಿ, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಸಯ್ಯಿದ್ ಶಾಹುಲ್ ಹಮೀದ್ ತಂಙಳ್ ಮರ್ಧಾಳ, ಸಯ್ಯಿದ್ ಶರಫುದ್ದೀನ್ ತಂಙಳ್ ಪಡ್ಡಂದಡ್ಕ, ಜಂಇಯ್ಯತುಲ್ ಉಲಮಾ ನಾಯಕರಾದ ಟಿ ಎಂ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದ್, ವಾಲೆಮುಂಡಾವು ಉಸ್ತಾದ್, ಕನ್ಯಾನ ಇಬ್ರಾಹಿಂ ಫೈಝಿ ಉಸ್ತಾದ್, ಸುನ್ನಿ ಅಬೂಬಕ್ಕರ್ ಫೈಝಿ ಉಸ್ತಾದ್, ಇಬ್ರಾಹಿಂ ಮದನಿ ಕಂಬಳಬೆಟ್ಟು, ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟು, ಅಬ್ದುಲ್ ಖಾದರ್ ಫೈಝಿ ಕೊಡುಂಗಾಯಿ, ಪಾಡಿ ಅಬ್ದುಲ್ ಹಮೀದ್ ಸಖಾಫಿ, ಅಬ್ದುಲ್ ಖಾದಿರ್ ಸಖಾಫಿ ಕಡಂಬು, ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ, ಅಬೂಬಕ್ಕರ್ ಸಿದ್ದೀಖ್ ಮಿಸ್ಬಾಹಿ, ಮುಹಮ್ಮದಾಲಿ ಸಖಾಫಿ ಅಶ್‌ಅರಿಯ್ಯಾ, ಮಜೂರು ಅಬೂಬಕ್ಕರ್ ಸ‌ಅದಿ, ಅಬ್ದುಲ್ ಜಲೀಲ್ ಸಖಾಫಿ ಇರ್ದೆ, ಆದಂ ಅಹ್ಸನಿ, ಪಿ ಕೆ ಮುಹಮ್ಮದ್ ಮದನಿ, ಜಿಲ್ಲಾ ಕೋಶಾಧಿಕಾರಿ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ವೆಸ್ಟ್ ಜಿಲ್ಲಾ ನಾಯಕರಾದ ಅಬೂಬಕ್ಕರ್ ಪಾರೆ, ಅಬ್ದುಲ್ ರಹೀಂ ಸ‌ಅದಿ ಕತಾರ್, ಬಶೀರ್ ಹಾಜಿ ಕುಂಬ್ರ, ಅಬ್ದುಲ್ ಹಮೀದ್ ಬಜ್ಪೆ, ಎಸ್‌ವೈಎಸ್ ರಾಜ್ಯ ನಾಯಕರಾದ ಅಶ್ರಫ್ ಸಖಾಫಿ ಮೂಡಡ್ಕ, ಕೆ ವೈ ಹಂಝ ಮದನಿ ಬೆಳ್ತಂಗಡಿ, ಎಂಬಿ ಸ್ವಾದಿಖ್ ಮಲೆಬೆಟ್ಟು, ಮುಸ್ತಫಾ ಕೋಡಪದವು, ಅಬೂಶಝ ಅಬ್ದುಲ್ ರಝಾಕ್ ಅಲ್ ಖಾಸಿಮಿ, ಸ್ವಾಲಿಹ್ ಮುರ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಫೀಖ್ ಸ‌ಅದಿ ಈಶ್ವರಮಂಗಳ, ಎಸ್‌ಎಂಎ ನಾಯಕರಾದ ಹಮೀದ್ ಹಾಜಿ ಕೊಡುಂಗಾಯಿ, ಯೂಸುಫ್ ಹಾಜಿ ಗೌಸಿಯಾ, ಅಬ್ಬಾಸ್ ಬಟ್ಲಡ್ಕ ಮೊದಲಾದ ಉಲಮಾ ಉಮರಾ ನಾಯಕರು, ವಿವಿಧ ಸುನ್ನಿ ಸಂಘಟನೆಯ ನಾಯಕರು ಭಾಗವಹಿಸಲಿದ್ದಾರೆ.

ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವ್ಯಾಪ್ತಿಯ ಜಿಲ್ಲಾ ಕೌನ್ಸಿಲರ್, ಆರು ಝೋನ್ ‌ಗಳ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ 34 ಸರ್ಕಳುಗಳ ಪಧಾದಿಕಾರಗಳು ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!