Tuesday, May 21, 2024
spot_imgspot_img
spot_imgspot_img

ವಿಟ್ಲ: ಹೊರೈಝನ್ ಶಾಲೆಯ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿರುವ ಮಹನಿಯರಿಗೆ ಅಭಿನಂದನಾ ಸಮಾರಂಭ

- Advertisement -G L Acharya panikkar
- Advertisement -
vtv vitla

ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲೆಯ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿರುವ ಮಹನೀಯರಿಗೆ ಅಭಿನಂದನಾ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಝುಬೈರ್ ಮಾಸ್ಟರ್ ವಹಿಸಿದ್ದರು. ಕಾರ್ಯದರ್ಶಿ ನೋಟರಿ ಅಬೂಬಕರ್ ವಿಟ್ಲ ಪ್ರಸ್ತಾವನೆ ಗೈದರು. ಶಾಲಾ ಕೋಶಾಧಿಕಾರಿ ಅಂದುಞಿ ಗಮಿ, ಮೇಲ್ವಿಚಾರಕ ಗಫೂರ್ ಪೊನ್ನೋಟು ,ಟ್ರಸ್ಟಿ ಇಕ್ಬಾಲ್ ಹಳೆಮನೆ,ಮಸೀದಿ ಅಧ್ಯಕ್ಷ ಶೀತಲ್ ಇಕ್ಬಾಲ್, ಕಾರ್ಯದರ್ಶಿ ಹಮೀದ್ ಬದ್ರಿಯಾ, ಕೋಶಾಧಿಕಾರಿ ಶರೀಫ್ ಪೊನ್ನೊಟ್ಟು, ಅಬೂಬಕರ್ ಅನಿಲಕಟ್ಟೆ, ವಿ.ಕೆ.ಎಂ.ಹಂಝ, ಲತೀಫ್ ಅನಿಲಕಟ್ಟೆ, ರಫೀಕ್ ಪೊನ್ನೋಟು, ಹಮೀದ್ ಕುದ್ದುಪದವು, ಉಪ ಮುಖ್ಯ ಶಿಕ್ಷಕಿ, ಗಾಯತ್ರಿ, ಒಕ್ಕೆತ್ತೂರು ರಫೀಕ್ ಮಾಸ್ಟರ್ ಮುಂತಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಸ್ವಾಗತಿಸಿದರು, ಶಾಲಾ ಆಡಳಿತ ಸಮಿತಿಯ ಹನೀಫ್ ಎಂ.ಎ.ವಂದಿಸಿದರು‌. ಶಾಲೆಯ ಪ್ರಗತಿಗೆ ಶ್ರಮಿಸುತ್ತಿರುವ ಮಹನೀಯರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

- Advertisement -

Related news

error: Content is protected !!