- Advertisement -
- Advertisement -


ವಿಟ್ಲ: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪದ ಮೇಲೆಗೆ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಕೇರಳ ಮೂಲದ ಸಂತೂ ಯಾನೆ ಸಂತೋಷ್ ಬಂಧಿತ ಆರೋಪಿ.
ಕನ್ಯಾನ ಗ್ರಾಮದ ವಿವಾಹಿತ ಮಹಿಳೆಯ ಮಾನಭಂಗಕ್ಕೆ ಸಂತು ಯತ್ನಿಸಿದ್ದಾನೆ. ಕೆಂಪು ಕಲ್ಲು ಲಾರಿಯಲ್ಲಿ ಲೋಡ್ ಕೆಲಸ ಮಾಡುವ ಆರೋಪಿ ಸಂತೋಷ್ ಬೈಕಿನಲ್ಲಿ ಬಂದು ಮನೆಗೆ ಹೋಗುತ್ತಿದ್ದ ಮಹಿಳೆಯನ್ನು ತಡೆದು ನಿಲ್ಲಿಸಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆಯ ಸಂಬಂಧಿಕರು ನೋಡಿದ್ದಾರೆ ಎನ್ನಲಾಗಿದೆ. ಇನ್ನು ಈ ವೇಳೆ ಆತ ಬೈಕ್ ಬಿಟ್ಟು ಪರಾರಿಯಾಗಿದ್ದ ಎಂದು ವಿಟ್ಲ ಪೊಲೀಸ್ ಠಾಣೆ ಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಕಾರ್ಯಚರಣೆ ನಡೆಸಿದ ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್.ಅವರ ನೇತೃತ್ವದ ಎಸ್.ಐ.ಸಂದೀಪ್ ಅವರ ತಂಡ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
- Advertisement -







