Wednesday, April 24, 2024
spot_imgspot_img
spot_imgspot_img

ವಿಟ್ಲ: ವಿ.ಹೆಚ್ ಕಾಂಪ್ಲೆಕ್ಸ್’ನಲ್ಲಿ ಕಿಚನ್ ಹಬ್ ಶುಭಾರಂಭ; ಕಿಚನ್ ಅಪ್ಲಾಯೆನ್ಸ್, ಟಾಯ್ಸ್, ಗಿಫ್ಟ್ ಐಟಮ್ಸ್’ಗಳು ಇಲ್ಲಿ ಲಭ್ಯ..!

- Advertisement -G L Acharya panikkar
- Advertisement -

ವಿಟ್ಲ: ಕಿಚನ್ ಅಪ್ಲಾಯೆನ್ಸ್, ಟಾಯ್ಸ್, ಗಿಫ್ಟ್ ಐಟಮ್ಸ್ ಗಳನ್ನು ಒಳಗೊಂಡ “ಕಿಚನ್ ಹಬ್” ಮಳಿಗೆ ಪುತ್ತೂರು – ವಿಟ್ಲ ರಸ್ತೆಯ ವಿ.ಹೆಚ್. ಕಾಂಪ್ಲೆಕ್ಸ್ ನಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಶುಭಾರಂಭಗೊ0ಡಿತು. ಶೈಖುನಾ ಮಾಣಿ ಉಸ್ತಾದ್ ಅವರ ಶುಭ ಹಾರೈಕೆಯೊಂದಿಗೆ ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಮಳಿಗೆಯನ್ನು ಉದ್ಘಾಟಿಸಿ ಶುಭಹಾರೈಸಿದ್ರು.

ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಯು.ಟಿ ಖಾದರ್, ಎಸ್.ಡಿ.ಪಿ.ಐ ಮುಖಂಡ ರಿಯಾಝ್ ಫರಂಗಿಪೇಟೆ, ಸಯ್ಯದ್ ಅನಸ್ ತಂಙಲ್ ಸಾಲ್ಮರ, ಸೌಖತ್ ಆಲಿ ಫೌಝಿ, ವಿಟ್ಲ ಕೇಂದ್ರ ಮಸೀದಿಯ ಖತೀಬ್ ಮಹಮ್ಮದ್ ಆಲಿ ಫೈಝಿ ಇರ್ಫಾನಿ, ಸೇರಿದಂತೆ ವಿವಿಧ ಗಣ್ಯರು ಶುಭಹಾರೈಸಿದ್ರು. ಕಿಚನ್ ಹಬ್‌ನ ಪಾಲುದಾರರಾದ ಉಬೈದ್ ವಿಟ್ಲ ಬಝಾರ್ ಮತ್ತು ರಶೀದ್ ನೆಲ್ಯಾಡಿ ಗಣ್ಯಾತಿಗಣ್ಯರನ್ನು ಆತ್ಮೀಯತೆಯಿಂದ ಬರಮಾಡಿಕೊಂಡರು.

ಶಾಕಿರ್ ಅಳಕೆ ಮಜಲು ಕಾರ್ಯಕ್ರಮ ನಿರೂಪಿಸಿದ್ರು. ಎಂ ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಅಬೂಬಕರ್ ಅನಿಲಕಟ್ಟೆ ವಂದಿಸಿದರು. ಈ ವೇಳೆ ಸಚಿನ್ ಟ್ರೇಡಿಂಗ್ ಕಂಪೆನಿಯ ಮಾಲಕ ಅಶೋಕ್, ಅನ್ಸಾರ್ ವಿಟ್ಲ, ತೌಸೀಫ್, ಸಿದ್ಧಿಕ್ ವಿಟ್ಲ ಉಪಸ್ಥಿತರಿದ್ದರು.

“ಕಿಚನ್ ಹಬ್” ಶುಭಾರಂಭದ ಪ್ರಯುಕ್ತ ಒಲೆ ರಹಿತ ಅಡುಗೆ ಸ್ಪರ್ಧೆ ನಡೆಯಿತು. ಕಾರ್ಯಕ್ರಮದಲ್ಲಿ ತುಳುಚಿತ್ರ ನಟ ದೇವದಾಸ್ ಕಾಪಿಕಾಡ್ ಮತ್ತು ಶರ್ಮಿಳ ದೇವದಾಸ್ ಭೇಟಿ ನೀಡಿದರು. ಉದ್ಯಮಿ ದಿವಾಕರ ಬಹರೈನ್, ವಿ.ಟಿವಿ ಆಡಳಿತ ನಿರ್ದೇಶಕ ರಾಮ್ ದಾಸ್ ಶೆಟ್ಟಿ ವಿಟ್ಲ, ಸರಸ್ವತಿ ಟೀಚರ್, ಪುತ್ತಾಕ ಉಪ್ಪಿನಂಗಡಿ, ಸೇರಿದಂತೆ ಮೊದಲಾದವರು ಜೊತೆಗಿದ್ದರು. ಒಲೆ ರಹಿತ ಅಡುಗೆ ಸ್ಪರ್ಧೆಯನ್ನು ನಿರೂಪಕಿ ಹೇಮ ಜಯರಾಮ್ ರೈ ನಿರ್ವಹಿಸಿದರು. ಈ ಸಂದರ್ಭ ಪ್ರತಿಭಾ ಶ್ರೀಧರ್ ಶೆಟ್ಟಿ, ಶಿವಾನಿ ಭಾಸ್ಕರ್ ಶೆಟ್ಟಿ, ರಫೀಕ್ ಝನ್ ಟೆಕ್ಸ್ ಟೈಲ್ಸ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ 15 ಮಂದಿ ಭಾಗವಹಿಸಿದ್ದರು. ವಿವಿಧ ತಿಂಡಿಗಳನ್ನು ಸಿದ್ಧಪಡಿಸಿ ಗಮನ ಸೆಳೆದರು. ಪ್ರಥಮ ಸ್ಥಾನವನ್ನು ಚಂದ್ರವತಿ ದೇವಸ್ಯ ಮತ್ತು ದ್ವಿತೀಯ ಸ್ಥಾನವನ್ನು ಸನ ವಿಟ್ಲ ಅವರು ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

- Advertisement -

Related news

error: Content is protected !!