Thursday, October 1, 2026
spot_imgspot_img
spot_imgspot_img

ವಿಟ್ಲ ಮುಡ್ನೂರು: ಗ್ರಾ ಪಂ ವ್ಯಾಪ್ತಿಯ ಘನತ್ಯಾಜ್ಯ ಘಟಕ ಉದ್ಘಾಟನಾ ಸಮಾರಂಭ ಹಾಗೂ ಹಿಂದೂ ರುದ್ರ ಭೂಮಿ ಲೋಕಾರ್ಪಣೆ ಕಾರ್ಯಕ್ರಮ

- Advertisement -
- Advertisement -

ಸಾಧಕರಿಗೆ ಸನ್ಮಾನ- ಸಹಾಯಧನ ಹಸ್ತಾಂತರ

ವಿಟ್ಲ ಮುಡ್ನೂರು: ಗ್ರಾಮ ಪಂಚಾಯತ್‌ ವ್ಯಾಪ್ತಿಯ ಘನತ್ಯಾಜ್ಯ ಘಟಕ ಉದ್ಘಾಟನಾ ಕಾರ್ಯಕ್ರಮ ಹಾಗೂ ಕುಂಡಡ್ಕ ಕುಶಾಲನಗರದಲ್ಲಿ ನಿರ್ಮಿಸಿರುವ ಹಿಂದೂ ರುದ್ರ ಭೂಮಿ ಲೋಕಾರ್ಪಣೆ ಕಾರ್ಯಕ್ರಮ ಅ. 7 ನೇ ಮಂಗಳವಾರ ನಡೆಯಿತು.

ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಪುನೀತ್‌ ಮಾಡತ್ತಾರು ಹಿಂದೂ ರುದ್ರ ಭೂಮಿ ಲೋಕಾರ್ಪಣೆಗೈದು ಬಳಿಕ ಘನತ್ಯಾಜ್ಯ ಘಟಕವನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಬಂಟ್ವಾಳ ತಾಲೂಕು ಪಂಚಾಯತ್‌‌ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್‌ ಕುಮಾರ್‌, , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸುರೇಶ್‌ ಗೌಡ, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಜಯ ಕೆ, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರು ವೇಣುಗೋಪಾಲ ಶೆಟ್ಟಿ ಮರುವಾಳ, ಸಾರ್ವಜನಿಕ ಹಿಂದೂ ರುದ್ರ ಭೂಮಿ ಕುಂಡಡ್ಕ ಅಧ್ಯಕ್ಷರು, ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್‌, ಪದ್ಮನಾಭ ಶೆಟ್ಟಿ ಚಪ್ಪುಡಿಯಡ್ಕ, ಕಾರ್ಯದರ್ಶಿ ಸಾರ್ವಜನಿಕ ಹಿಂದೂ ರುದ್ರ ಭೂಮಿ ಕುಂಡಡ್ಕ, ಉಪಾಧ್ಯಕ್ಷೆ ರೋಹಿಣಿ ಡಿ, ಸದಸ್ಯರುಗಳಾದ ಜಯಪ್ರಕಾಶ್‌ ನಾಯಕ್‌ ಎನ್‌, ಮಹಾಬಲೇಶ್ವರ ಭಟ್‌, ಲೋಕೇಶ್‌ ಪಿ, ಎಲ್ಯಣ್ಣ ಪೂಜಾರಿ, ಸಿದ್ದಿಕ್‌, ಶ್ರೀಮತಿ ಭಾರತೀ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಪ್ರೇಮಲತಾ ಹಾಗೂ ಚಿಗುರು ಸಮಿತಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ದಿವ್ಯ, ತಾಲೂಕು ಕಾರ್ಯಕ್ರಮ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸುಧಾ, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಟ್ಲ ಮುಡ್ನೂರು ಗ್ರಾಮದ ನಿವೃತ್ತ ಗ್ರಾಮ ಸಹಾಯಕ ರುಕ್ಮ ಮೂಲ್ಯ, ಆಶಾ ಕಾರ್ಯಕರ್ತೆ ಶ್ರೀಮತಿ ಉಮಾವತಿ, ವರ್ಗಾವಣೆಗೊಂಡ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾಗ್ಯಶ್ರೀ, ಹಾಗೂ ನಾಟಿ ವೈದ್ಯರುಗಳಾದ ಭೀಫಾತುಮ್ಮ ಹಾಗೂ ಮೇರಿ ಪಾಯಸ್‌ರವರನ್ನು ಹಾಗೂ ದೈವನರ್ತಕ ಶೇಖರ ಪರವ ಮತ್ತು ವಸಂತ ಪಿಲಿಂಜರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಅಭಿನಂದಿಸಲಾಯಿತು.

ಹಾಗೂ ಪ.ಜಾತಿ ಮತ್ತು ಪಂಗಡ ಶ್ರೇಯೋಭಿವೃದ್ಧಿಯ ಮೀಸಲಾತಿ ಅನುದಾನದಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಟ್ಯಾಂಕ್‌ ಮತ್ತು ಚಯರ್‍ ವಿತರಣೆ, ಶವಸಂಸ್ಕಾರ ಸಹಾಯಧನ, ವಿದ್ಯಾಭ್ಯಾಸ ಸಹಾಯಧನ ಚೆಕ್‌ ಹಸ್ತಾಂತರಿಸಲಾಯಿತು.

ಮಾಜಿ ಅಧ್ಯಕ್ಷ ಜಯಪ್ರಕಾಶ್‌ ನಾಯಕ್‌ ಸ್ವಾಗತಿಸಿ, ಸದಸ್ಯ ಮಹಾಬಲೇಶ್ವರ ಭಟ್‌ ವಂದಿಸಿದರು. ಇಂಪನಾ ಲೋಟ್ಲಿಕರ್‌ ಪ್ರಾರ್ಥಿಸಿ, ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!