ವಿಟ್ಲ ಪಡ್ನೂರು ಗ್ರಾ. ಪಂ ಅಧಿಕಾರಿಗಳು, ಆಡಳಿತ ಸದಸ್ಯರಿಂದ ವರದಿಗೆ ಸ್ಪಂದನೆ




ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ನಬೈಲು ಹೆದ್ದಾರಿಯ ಕಡಂಬು ಸೇತುವೆ ಬಳಿ ಬೇಕಾಬಿಟ್ಟಿ ಕಸ, ತ್ಯಾಜ್ಯ ಎಸೆಯುತ್ತಿದ್ದು, ಈ ಬಗ್ಗೆ ವಿಟ್ಲ ಪಡ್ನೂರು ಗ್ರಾಮ ಪಂಚಾಯತಿಗೆ ಸ್ಥಳೀಯರು ಹಲವು ಬಾರಿ ದೂರು ನೀಡಿದ್ದರೂ ಯಾವುದೇ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಪಂಚಾಯತ್ ಆಡಳಿತ ವಿರುದ್ಧ ಬ್ಯಾನರ್ ಹಾಕುವ ಮೂಲಕ ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಸರ ನೈರ್ಮಲ್ಯ ಹಾಗೂ , ಜನರ ಆರೋಗ್ಯದ ಹಿತ ದೃಷ್ಟಿಯಿಂದ ಈ ಬಗ್ಗೆ ಆದಷ್ಟು ಬೇಗನೆ ಪಂಚಾಯತ್ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಟಿವಿ ವರದಿ ಪ್ರಕಟಿಸಲಾಗಿತ್ತು.
ಇದೀಗ ಜನರ ಆಕ್ರೋಶ ಹಾಗೂ ವರದಿಗೆ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸ್ಪಂದಿಸಿದ್ದು, ರಸ್ತೆ ಬದಿಯಲ್ಲಿ ದುರ್ನಾತ ಬೀರುತ್ತಿದ್ದ ಕಸ ತ್ಯಾಜ್ಯಗಳನ್ನು ತೆರವು ಗೊಳಿಸಿ, ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾಗಿದೆ. ಹಾಗೂ ರಸ್ತೆ ಬದಿಯಲ್ಲಿದ್ದ ತೋಡಿಗೆ ಯಾರೂ ಕಸ ಎಸೆಯದಂತೆ ತಡೆಬೇಲಿ ಅಳವಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೂ ಯಾರಾದರೂ ಈ ಜಾಗದಲ್ಲಿ ಕಸ ಎಸೆಯುವ ಬಗ್ಗೆ ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.








