Monday, April 29, 2024
spot_imgspot_img
spot_imgspot_img

ವಿಟ್ಲ: ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ವತಿಯಿಂದ ಅಂತಾರಾಜ್ಯ ಪುರುಷರ ಕಬ್ಬಡಿ ಪಂದ್ಯಾಟ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆ

- Advertisement -G L Acharya panikkar
- Advertisement -

ರೋಮಾಂಚನಕಾರಿ ಪ್ರದರ್ಶನಕ್ಕೆ ಸಾಕ್ಷಿಯಾದ 38 ಕಬಡ್ಡಿ ತಂಡಗಳು & 16 ಹಗ್ಗಜಗ್ಗಾಟ ತಂಡಗಳು

ವಿಟ್ಲ: ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ಇದರ ವತಿಯಿಂದ ಅಂತಾರಾಜ್ಯ ಪುರುಷರ ಕಬ್ಬಡಿ ಪಂದ್ಯಾಟ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಶ್ರೀಧರ್ ಶೆಟ್ಟಿ ಗುಬ್ಯ ಮೇಗಿನ ಗುತ್ತು, ದಯಾನಂದ ಶೆಟ್ಟಿ ಉಜಿರೆಮಾರ್, ಗೆಜ್ಜೆಗಿರಿ ಸೇವಾಟ್ರಸ್ಟಿ ಚಂದ್ರಶೇಖರ್ ಉಚ್ಚಿಲ, ಕರ್ನಾಟಕ ಕುಸ್ತಿ ಸಂಘದ ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ರೋಷನ್ ರೈ, ಪುತ್ತೂರು ವಸಂತ ಕುಮಾರ್ ಅಮೈ, ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ರಾಮ್ ಭಟ್ ನೀರಪಲಿಕೆ ಉಪಾಧ್ಯಕ್ಷರು ಇಡ್ಕಿದು ಸೇವಾ ಸೊಸೈಟಿ, ಸೀನಪ್ಪ ಗೌಡ ಅಮೈ, ಪ್ರಕಾಶ್ ಕೋಡಿ ಜಾಲು, ಉಪಸ್ಥಿತರಿದ್ದರು.

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಕ್ರೀಡಾಂಗಣ ಉದ್ಘಾಟನೆ ಮಾಡಿದರು. ಸಮಾರೋಪ ಸಮಾರಂಭದಲ್ಲಿ ರೈ ಎಸ್ಟೇಟ್ & ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಅಶೋಕ್ ಕುಮಾರ್ ರೈ ಬಹುಮಾನ ವಿತರಣೆ ಮಾಡಿದರು.

ಕಬಡ್ಡಿ ಪಂದ್ಯಾಟದ ಎಂಟು ಬಹುಮಾನಗಳಲ್ಲಿ ಸೌಹಾರ್ದ ಫ್ರೆಂಡ್ಸ್ ಕಂಬಳಬೆಟ್ಟು ತಂಡ ಪ್ರಥಮ ಸ್ಥಾನವನ್ನು ಗಳಿಸಿ ವಿನ್ನರ್‍ಸ್‌ ಆಗಿ ಹೊರಹೊಮ್ಮಿದರು. ಕೇಸರಿ ಫ್ರೆಂಡ್ಸ್ ಕೆಲಿಂಜ ದ್ವಿತೀಯ ಸ್ಥಾನ ಪಡೆದು ರನ್ನರ್‍ಸ್‌ ಆಗಿ ಮಿಂಚಿದರು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸ್ವಾಮಿ ಕೊರಗಜ್ಜ ತಂಡ ಕಾಲ್ತಾಡಿ, ದ್ವಿತೀಯ ಸ್ಥಾನವನ್ನು ಫ್ರೆಂಡ್ಸ್ ಕಾಡಬೆಟ್ಟು ತಂಡ ಪಡೆದುಕೊಂಡರು. ಒಟ್ಟು 38 ಕಬಡ್ಡಿ ತಂಡಗಳು ಹಾಗೂ 16 ಹಗ್ಗ ಜಗ್ಗಾಟ ತಂಡಗಳು ಭಾಗವಹಿಸಿ ರೋಮಾಂಚನಕಾರಿ ಪ್ರದರ್ಶನ ನೀಡುವಲ್ಲಿ ಎಲ್ಲಾ ತಂಡಗಳು ಸಾಕ್ಷಿಯಾಯಿತು. ಉತ್ತಮ ದಾಳಿಗಾರ ಉತ್ತಮ ಹಿಡಿತಗಾರ ಸವ್ಯಸಾಚಿ ಸೇರಿ ಅನೇಕ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ಸನ್ಮಾನ, ನೊಂದವರಿಗೆ ಸಹಾಯ ಹಸ್ತ ನೀಡಿ ಕಾರ್ಯಕ್ರಮವನ್ನು ನೀಡಲಾಯಿತು. ಕಾರ್ಯಕ್ರಮದ ಸ್ವಾಗತ ಮತ್ತು ಪ್ರಸ್ತಾವನೆಯನ್ನು ಸಿದ್ಧಿವಿನಾಯಕ ಯುವಕ ಮಂಡಲದ ಅಧ್ಯಕ್ಷ ಕಾರ್ತಿಕ್ ಶೆಟ್ಟಿ ಮೂಡೈಮಾರ್ ನೆರವೇರಿಸಿರದರು. ಜಯದೀಪ್ ಅಮೈ, ಮನ್ಮಥಶೆಟ್ಟಿ ಪುತ್ತೂರು, ಸುರೇಶ್ ಪಡಿಪನ್ನಿ, ಇವರ ಉತ್ತಮ ಶೈಲಿಯ ನಿರೂಪಣೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಜನಾರ್ಧನ ಕಾರ್ಯಾಡಿ ಧನ್ಯವಾದ ಗೈದರು.

- Advertisement -

Related news

error: Content is protected !!