Tuesday, May 7, 2024
spot_imgspot_img
spot_imgspot_img

ವಿಟ್ಲ: ಸ್ಥಳೀಯ ಶಾಲಾ ಮಕ್ಕಳ “ಝೇಂಕಾರ” ಸಾಂಸ್ಕೃತಿಕ ಸ್ಪರ್ಧೆ… ವಿಜೇತರಾಗಿ ಮಿಂಚಿದ ತಂಡ ಯಾವುದು?

- Advertisement -G L Acharya panikkar
- Advertisement -

ವಿಟ್ಲದಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ಸಸ್ಯಮೇಳ ಮತ್ತು ಆಹಾರ ಮೇಳ, ಮ್ಯೂಸಿಕಲ್ ನೈಟ್ ಅದ್ದೂರಿ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ಕಾಲೇಜು ಮಕ್ಕಳಿಗಾಗಿ ಏರ್ಪಡಿಸಿದ “ಝೇಂಕಾರ” ಸಾಂಸ್ಕೃತಿಕ ಸ್ಪರ್ಧೆ ಸೆ. 3 ರಂದು ವಿಟ್ಲ ನೀರಕಣಿ ಜೆ ಎಲ್ ಅಡಿಟೋರಿಯಂನಲ್ಲಿ ನಡೆಯಿತು.

“ಝೇಂಕಾರ” ಸಾಂಸ್ಕೃತಿಕ ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆದಿದ್ದು ಪ್ರಾಥಮಿಕ ವಿಭಾಗದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿನ ವಿದ್ಯಾರ್ಥಿಗಳ ತಂಡ ಪ್ರಥಮ ಬಹುಮಾನ ಪಡೆದಿದ್ದಾರೆ.

ಪ್ರೌಢ ವಿಭಾಗದಲ್ಲಿ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನದೊಂದಿಗೆ ವಿನ್ನರ್ಸ್ ಆಗಿ ಮಿಂಚಿದರು. ಸೈಂಟ್ ರೀಟಾ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಪಡೆದು ರನ್ನರ್ಸ್ ಆಗಿ ಹೊರಹೊಮ್ಮಿದರು. ಸರಕಾರಿ ಪ್ರೌಢಶಾಲೆ ಆರ್ ಎಂ ಎಸ್ ಎ ವಿಟ್ಲ ಶಾಲೆಯ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಸ್ಪರ್ಧೆಯ ತೀರ್ಪುಗಾರರಾಗಿ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಅಧ್ಯಾಪಕ ಮಹೇಶ್ ಕುಮಾರ್ ವಿಟ್ಲ ಅರಮನೆ, ಕಾರ್ತಿಕ್ ಶೆಟ್ಟಿ ಮೂಡೈಮಾರ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ಘಟಕದ ಅಧ್ಯಕ್ಷ , ವಿಟಿವಿ ನಿರ್ದೇಶಕ ರಾಮ್‌ದಾಸ್ ಶೆಟ್ಟಿ ವಿಟ್ಲ, ಶ್ರೀಮತಿ ಶೋಭಾ ಮಂಗಳೂರು ಸಹಕರಿಸಿದರು.

ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಪರ್ಧಾ ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿ ನೀಡಿ ಪ್ರೋತ್ಸಾಹಿಸಲಾಯಿತು. ಹಾಗೂ ಸ್ಪರ್ಧೆಯ ಆಕರ್ಷಣೆಯಾಗಿ ಪ್ರೇಕ್ಷಕರ ಮನಗೆದ್ದ ಸರಕಾರಿ ಪ್ರೌಢಶಾಲೆ ಆರ್ ಎಂ ಎಸ್ ಎ ವಿಟ್ಲ ಶಾಲೆಯ ವಿಶೇಷಚೇತನ ಅಂಗವಿಕಲ ವಿದ್ಯಾರ್ಥಿ ತನ್ಮಯ್ ಇವರನ್ನು ವಿಶೇಷ ಪ್ರತಿಭೆಯಾಗಿ ಶಾಲು ಹಾಗೂ ನಗದು ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮೇಳದ ವ್ಯವಸ್ಥಾಪಕ ಜಯರಾಮ್ ಬುಳೇರಿಕಟ್ಟೆ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ಜಯರಾಮ್ ಬಲ್ಲಾಳ್, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಸದಸ್ಯ ಮೋಹನ್‌ಕಟ್ಟೆ, ಮೇಳದ ಸಹ ವ್ಯವಸ್ಥಾಪಕರಾದ ಶ್ರೀಮತಿ ಮಮತಾ ಮಂಗಳೂರು, ತರುಣ್ ಮಂಗಳೂರು, ಉಪಸ್ಥಿತರಿದ್ದು ಸಹಕರಿಸಿದರು. ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!