Saturday, April 27, 2024
spot_imgspot_img
spot_imgspot_img

ವಿಟ್ಲ: (ಡಿ 7-10 )ಕಬ್ಸ್-ಬುಲ್ ಬುಲ್ಸ್ ಉತ್ಸವ ಸ್ಕೌಟ್ಸ್ -ಗೈಡ್ಸ್ ಮೇಳ ರೋವರ್‍ಸ್- ರೇಂಜರ್‍ಸ್ ಸಮಾಗಮ ಕ್ಯಾಂಪೋರಿ 2023-2024

- Advertisement -G L Acharya panikkar
- Advertisement -

ವಿಟ್ಲ: ದ.ಕ.ಜಿ.ಪಂ. ಶಾಲಾ ಶಿಕ್ಷಣ ಇಲಾಖೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮತ್ತು ವಿಟ್ಲ ಸ್ಥಳೀಯ ಸಂಸ್ಥೆ ಇವರ ಸಹಭಾಗಿತ್ವದಲ್ಲಿ ಜಿಲ್ಲಾ ಕ್ಯಾಂಪೋರಿ 2023-2024 ಕಬ್ಸ್-ಬುಲ್ ಬುಲ್ಸ್ ಉತ್ಸವ ಸ್ಕೌಟ್ಸ್ -ಗೈಡ್ಸ್ ಮೇಳ ರೋವರ್‍ಸ್- ರೇಂಜರ್‍ಸ್ ಸಮಾಗಮವು ಡಿ. 7 ಗುರುವಾರದಿಂದ ಡಿ. 10 ಆದಿತ್ಯವಾರದ ವರೆಗೆ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇಲ್ಲಿ ನಡೆಯಲಿದೆ.

ಡಿ.7 ರಂದು ಸಂಜೆ 6:00 ಗಂಟೆಗೆ ರೋವರ್‍ಸ್- ರೇಂಜರ್‍ಸ್ ಸಮಾಗಮ ಉದ್ಘಾಟನೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್‍ ರೈ ವಹಿಸಲಿದ್ದಾರೆ, ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲಇದರ ಅಧ್ಯಕ್ಷ ಸುದರ್ಶನ ಪಡಿಯಾರ್‍ ಅಧ್ಯಕ್ಷತೆ ವಹಿಸಲಿದ್ದಾರೆ. ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಹಸಮಯ ಚಟುವಟಿಕೆಗಳ ಉದ್ಘಾಟನೆಯನ್ನು ವಿಟ್ಲ ವಿಠಲ ಕನ್‌ಸ್ಟ್ರಕ್ಷನ್ ಸುರೇಶ್ ಬನಾರಿ, ಲ/ ಜೆಸಿಂತಾ ಮಸ್ಕರೇನಸ್, ವಿಟ್ಲ ಭಾರತ್ ಕನ್‌ಸ್ಟ್ರಕ್ಷನ್ ಭಾಸ್ಕರ್‍ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ದೇವಪ್ಪ ಪೂಜಾರಿ ನಿಡ್ಯ ವಹಿಸಲಿದ್ದಾರೆ.

ಡಿ. 8 ರಂದು 5:45 ಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳ ಉದ್ಘಾಟನೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಪರಮಪೂಜ್ಯ ಗುರುದೇವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಮಾಣಿಲ , ಶ್ರೀ ಪರಮಪೂಜ್ಯ ಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಉಪಸ್ಥಿತರಿರುವರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದ.ಕ ಜಿಲ್ಲಾ ಕ್ಯಾಂಪೋರಿ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಅಧ್ಯಕ್ಷತೆ ವಹಿಸಲಿದ್ದಾರೆ. ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಂಸ್ಕ್ರತಿಕ ಕಾರ್‍ಯಕ್ರಮ ಉದ್ಘಾಟನೆ ವಿಟ್ಲ ಅರಮನೆ ಕೃಷ್ಣಯ್ಯ ಬಲ್ಗಾಳ್ , ವಿಟ್ಲ ಮಂಗೇಶ್ ಭಟ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ರಾಜೇಶ್ ವಿಟ್ಲ, ವಿಟ್ಲ ಸರಕಾರಿ ಪ್ರೌಢಶಾಲೆ ಮುಖೋಪಾಧ್ಯಾಯರು ಅನ್ನಪೂರ್ಣ ವಹಿಸಲಿದ್ದಾರೆ.

ಡಿ. 9 ರಂದು ಬೆಳಗ್ಗೆ 10:30 ಕ್ಕೆ ಕಬ್ಸ್-ಬುಲ್ ಬುಲ್ಸ್ ಉತ್ಸವ ಉದ್ಘಾಟನೆ ವಿಟ್ಲ ಶೋಕಮಾತೆ ಇಗರ್ಜಿ ಧರ್ಮಗುರುಗಳು ರೆ. ಫಾ ಐವನ್ ಮೈಕಲ್ ರೋಡ್ರಿಗಸ್, ವಿಟ್ಲ ಕೇಂದ್ರ ಜುಮಾ ಮಸ್ಜಿದ್ ಮೇಗಿನಪೇಟೆ ಧರ್ಮಗುರುಗಳು ಬಹು| ಮುಹಮ್ಮದ್ ನಸೀಹ್ ದಾರಿಮಿ ಘನ ಉಪಸ್ಥಿತರಿರುವರು. ದ.ಕ ಲೋಕಸಭೆ ಮಂಗಳೂರು ಸಂಸದರು, ನಳಿನ್ ಕುಮಾರ್‍ ಕಟೀಲ್ ಕಾರ್ಯಕ್ರಮ ಉದ್ಘಾಡಿಸಲಿದ್ದಾರೆ. ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ಇದರ ಉಪಾಧ್ಯಕ್ಷ ಸತೀಶ್ ಆಳ್ವ ಇರಾಬಾಳಿಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವೈದ್ಯಲೋಕ ಉದ್ಘಾಟನೆ ಲಯನ್ಸ್ ಜಿಲ್ಲೆ 317 ಡಿ ಮಾಜಿ ಗವರ್ನರ್‍, ದ.ಕ ಜಿಲ್ಲಾ ಶಾಮಿಯಾನ ಮಾಲಿಕರ ಸಂಘ ಅಧ್ಯಕ್ಷ ಬಾಬು ಕೊಪ್ಪಳ, ವಿಟ್ಲ ಹೋನೆಸ್ಟ್ ಮಹಮ್ಮದ್ ಇಕ್ಬಾಲ್, ವಿಟ್ಲ ಸರಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯೋಪಾಧ್ಯಾಯನಿ ವಾರಿಜ ಕುಮಾರಿ ವಹಿಸಲಿದ್ದಾರೆ.

ಡಿ. 9 ರಂದು 5:30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ವಿಟ್ಲ ಅರಮನೆ ಬಂಗಾರು ಅರಸರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದ. ಕ ಭಾರತ್ ಸ್ಕೌಟ್ಸ್ & ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತಕ ಡಾ| ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಭಾರತ್ ಸ್ಕೌಟ್ಸ್ & ಗೈಡ್ಸ್ ರಾಜ್ಯ ಮುಖ್ಯ ಆಯುಕ್ತಕ ಪಿ. ಜಿ. ಆರ್‍ ಸಿಂಧ್ಯ ಸಮಾರೋಪ ಭಾಷಣ ಮಾಡಲಿದ್ದಾರೆ. ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಾನಪದಲೋಕ ಉದ್ಘಾಟನೆ ಕೋಡಪದವು ಇಕೋ ವಿಷನ್ ರಾಜಾರಾಂ ಬಲಿಪಗುಳಿ, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ರೋ. ಕಿರಣ್ ಕುಮಾರ್‍, ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ರೆ.ಫಾ. ಸುನೀಲ್ ಪ್ರವೀಣ್ ಪಿಂಟೋ ವಹಿಸಲಿದ್ದಾರೆ.

ಸಮಾರಂಭದಲ್ಲಿ ಕೃಷಿಲೋಕ ಉದ್ಘಾಟನೆಯನ್ನು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ರಮೇಶ್ ಎಂ. ಬಾಯರು, ವಿಟ್ಲ ಜೆ.ಸಿ. ಐ ಅಧ್ಯಕ್ಷ ಪರಮೇಶ್ವರ ಹೆಗ್ಡೆ, ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲರು ಜಯರಾಮ ರೈ ನಡೆಸಲಿದ್ದಾರೆ. ನಗರ ಮೆರವಣಿಗೆ ಉದ್ಘಾಟನೆಯನ್ನು ವಿಟ್ಲ ಸರ್ಕಲ್ ಇನ್ಸ್ಪೆಕ್ಟರ್‍ ನಾಗರಾಜ್ ಹೆಚ್.ಇ, ಬಂಟ್ವಾಳ ದೈಹಿಕ ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್‍, ವಿಟ್ಲ ವಿಠಲ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ಆದರ್ಶ ಚೊಕ್ಕಾಡಿ ಇವರು ನಡೆಸಲಿದ್ದಾರೆ. ವಿಜ್ಞಾನ ಲೋಕ ಉದ್ಘಾಟನೆಯನ್ನು ಗೋಳ್ತಮಜಲು ಅನುಗ್ರಹ ವಿದ್ಯಾಸಂಸ್ಥೆಸಂಚಾಲಕರು ಯಾಸಿನ್ ಬೇಗ್ , ಸಂತೋಷ್ ಕುಮಾರ್‍ ಶೆಟ್ಟಿ ಪೆಲತ್ತಡ್ಕ , ವಿಟ್ಲ ಮಾದರಿ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ರವಿಶಂಕರ ಶಾಸ್ತ್ರೀ, ವಿಟ್ಲ ಆಂಗ್ಲ ಮಾಧ್ಯಮ ಶಾಲೆ ಆಡಳಿತಾಧಿಕಾರಿ ರಾಧಾಕೃಷ್ಣ ಎ. ನಡೆಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!